×
Ad

ಆಶಾ ಮೆಂಟರ್ಸ್‍ಗಳನ್ನು ವಜಾ ಮಾಡಿದ ಸರಕಾರ

Update: 2025-06-13 21:03 IST

ಬೆಂಗಳೂರು : ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 195 ಆಶಾ ಮೆಂಟರ್ಸ್‍ಗಳನ್ನು ರಾಜ್ಯ ಸರಕಾರವು ವಜಾಗೊಳಿಸಿ, ಶುಕ್ರವಾರದಂದು ಆದೇಶ ಹೊರಡಿಸಿದೆ.

ಎನ್‍ಎಚ್‍ಎಂ ಅಡಿಯಲ್ಲಿ ಶುಶ್ರೂಷಕರಿಗೆ ವಿಧಿಸಿರುವ ಅರ್ಹತೆ ಇದ್ದವರನ್ನು ಆಶಾ ಮೆಂಟರ್ಸ್‍ಗಳಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಈಗ ಅವರನ್ನು ವಜಾ ಮಾಡಿದ್ದು, ಆಯಾ ಜಿಲ್ಲೆಗಳಲ್ಲಿ ಎನ್‍ಎಚ್‍ಎಂ ಅಡಿ ಖಾಲಿ ಇರುವ ಶುಶೂಷಕರ ಹುದ್ದೆಗಳಿಗೆ ಗುತ್ತಿಗೆ ನೌಕರರಾಗಿ ಆದ್ಯತೆ ಮೇಲೆ ನೇಮಿಸಲು ಪರಿಗಣಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಆಶಾ ಮೆಂಟರ್ಸ್‍ಗಳು ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇನ್ನು ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಮಹಿಳಾ ಆರೋಗ್ಯ ಸಂದರ್ಶಕರು, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗೂ ಉಪಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ನಿರ್ವಹಿಸಬೇಕು ಎಂದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News