ಕಾರು ಓವರ್‌ಟೇಕ್ ವೇಳೆ ಗಲಾಟೆ ಪ್ರಕರಣ | ಅನಂತ್ ಕುಮಾರ್ ಹೆಗಡೆಗೆ ತಾತ್ಕಾಲಿಕ ರಿಲೀಫ್
Update: 2025-06-26 22:15 IST
ಅನಂತ್ ಕುಮಾರ್ ಹೆಗಡೆ
ಬೆಂಗಳೂರು : ದಾಬಸಪೇಟೆ ಬಳಿಯ ಕಾರು ಓವರ್‌ಟೇಕ್ ವೇಳೆ ಗಲಾಟೆ ಪ್ರಕರಣದಲ್ಲಿ ಅನಂತ್ ಕುಮಾರ್ ಹೆಗಡೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅನಂತ್ ಕುಮಾರ್ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ. ಅಲ್ಲದೆ, ಪೊಲೀಸರ ತನಿಖೆಗೆ ಸಹಕರಿಸಲು ಅನಂತ ಕುಮಾರ್ ಹೆಗಡೆಗೆ ಹೈಕೋರ್ಟ್ ಸೂಚನೆ ನೀಡಿ ನ್ಯಾಯಮೂರ್ತಿ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಮಧ್ಯಂತರ ಆದೇಶ ನೀಡಿದೆ.