×
Ad

ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ವಾರ್ಷಿಕ ಪ್ರಶಸ್ತಿ ಪ್ರಕಟ: ಡಿ.31ರಂದು ಪ್ರದಾನ

Update: 2023-12-26 22:28 IST

ಬೆಂಗಳೂರು: ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ವತಿಯಿಂದ ನೀಡುವ 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾಜಿ ಸಚಿವ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಪ್ರೆಸ್‍ಕ್ಲಬ್ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪತ್ರಿಕಾ ವಿತರಕರಿಗೆ ಅಪಘಾತವಿಮೆ ಯೋಜನೆ ಪ್ರಕಟಿಸಿದ ಕಾರ್ಮಿಕ ಸಚಿವ ಸಂತೊಷ್ ಲಾಡ್ ಹಾಗೂ ಏಷ್ಯಾ ಬ್ಯಾಸ್ಕೇಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಕನ್ನಡಿಗ ಡಾ. ಕೆ. ಗೋವಿಂದರಾಜು ಅವರಿಗೆ ಪ್ರೆಸ್‍ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.  

ಮಾಧ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಮಂದಿಗೆ ಪ್ರೆಸ್‍ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ. ಸದಾಶಿವ ಶೆಣೈ. ಕೆ, ಆರ್. ಶಂಕರ್, ಜನಾರ್ಧನಾಚಾರಿ ಕೆ.ಎಸ್, ಡಾ. ಕೂಡ್ಲಿ ಗುರುರಾಜ್, ಕೆ.ಕೆ ಮೂರ್ತಿ, ನಾಗರಾಜ. ಎಂ. ರೂಪಾ ಆರ್. ರಾವ್, ಸತೀಶ್‍ಕುಮಾರ್ ಬಿ.ಎಸ್, ರಾಕೇಶ್ ಪ್ರಕಾಶ್, ರಮೇಶ್ ಬಿ.ಎನ್ ಪ್ರೆಸ್‍ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಕಿರಣ್ ಹೆಚ್.ವಿ, ಚನ್ನಕೃಷ್ಣ ಪಿ.ಕೆ, ವಿಜಯ್‍ಕುಮಾರ್ ಮಲಗಿಹಾಳ್, ಮನೋಜ್ ಕುಮಾರ್, ಮುತ್ತು. ಪಿ, ಶ್ರೀಕಂಠ ಶರ್ಮ. ಆರ್, ಸಿದ್ದೇಶ್‍ಕುಮಾರ್ ಹೆಚ್.ಪಿ., ಅಫ್ಶಾನ್ ಯಾಸ್ಮಿನ್, ಚಂದ್ರಶೇಖರ್. ಎಂ, ಭಾಸ್ಕರ್ ಕೆ.ಎಸ್., ಸುಭಾಷ್ ಹೂಗಾರ್, ಪ್ರಸನ್ನಕುಮಾರ್ ಲೂಯಿಸ್, ಶಂಕರೇಗೌಡ ಹೆಚ್.ಡಿ, ಲಿಂಗರಾಜು ಡಿ. ನೊಣವಿನಕೆರೆ, ಮೋಹನ್‍ರಾವ್ ಸಾವಂತ್. ಜಿ, ಅನಂತರಾಮು ಸಂಕ್ಲಾಪುರ್. ಎಲ್, ಕೌಶಿಕ್ ಆರ್., ಲಕ್ಷ್ಮಿ ಸಾಗರ ಸ್ವಾಮಿಗೌಡ, ಚಿದಾನಂದ ಪಟೇಲ್ ಪ್ರೆಸ್‍ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಡಿ.31 ರಂದು ಪ್ರೆಸ್‍ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.  ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಸತಿ ಸಚಿವ ಝಮೀರ್ ಅಹ್ಮದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News