×
Ad

ಪೊಲೀಸ್ ಇಲಾಖೆಯಲ್ಲಿ 7,925 ಹುದ್ದೆಗಳ ನೇಮಕಾತಿ ಪ್ರಕ್ರಿಯೆ : ಪ್ರಿಯಾಂಕ್ ಖರ್ಗೆ

Update: 2026-07-02 22:42 IST

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಲ್ಲಿ ಒಟ್ಟು 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವತಿಯಿಂದ ಪೊಲೀಸ್ ಇಲಾಖೆಉಯ ಡಿಟೆಕ್ಟಿವ್ ಸಬ್-ಇನ್ಸ್‌ ಪೆಕ್ಟರ್, ಸಶಸ್ತ್ರ ಪೊಲೀಸ್ ಕಾನ್ಸ್‌ ಟೇಬಲ್, ಸಿವಿಲ್ ಪೊಲೀಸ್ ಕಾನಾ ಟೇಬಲ್, ವಿಶೇಷ ಮೀಸಲು ಪೊಲೀಸ್ ಕಾಕ್ಸ್‌ ಟೇಬಲ್ ಸೇತಿ ಒಟ್ಟು 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

20 ಡಿಟೆಕ್ಟಿವ್ ಸಬ್-ಇನ್ಸ್‌ ಪೆಕ್ಟರ್ ಹುದ್ದೆಗಳ ಪೈಕಿ 5 ಕಲ್ಯಾಣ ಕರ್ನಾಟಕ(ಕೆಕೆ): 15 ಉಳಿದ ಭಾಗಕ್ಕೆ(ಎನ್.ಕೆ.ಕೆ) ಮೀಸಲಿಡಲಾಗಿದೆ. ಈ ಅಧಿಸೂಚನೆಗಳು ಸಂಪೂರ್ಣವಾಗಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೆಇಎ ವತಿಯಿಂದ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. 1,600 ಸಶಸ್ತ್ರ ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಗಳ ಪೈಕಿ 179 ಕಲ್ಯಾಣ ಕರ್ನಾಟಕಕ್ಕೆ, 1,421 ಉಳಿದ ಭಾಗಕ್ಕೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಈಗಾಗಲೇ ಕೆಇಎ ವೆಬ್‍ಸೈಟ್‍ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂ.22ರಿಂದ ಆರಂಭಗೊಂಡಿದ್ದು, ಜು.24ರವರೆಗೆ ನಡೆಯಲಿದೆ. ಫೆ.6ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

3,991 ಪೊಲೀಸ್ ಕಾನ್ಸ್‌ ಟೇಬಲ್(ಸಿವಿಲ್) ಹುದ್ದೆಗಳ ಪೈಕಿ 596 ಕಲ್ಯಾಣ ಕರ್ನಾಟಕಕ್ಕೆ, 3,395 ಉಳಿದ ಭಾಗಕ್ಕೆ ಮೀಸಲಿಡಲಾಗಿದೆ. ಕೆಇಎ ವೆಬ್‍ಸೈಟ್‍ನಲ್ಲಿ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಕೆ ಅವಧಿ ಜೂ.8ರಿಂದ ಆರಂಭಗೊಂಡಿದೆ. ಜು.3 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ ಆ.2ರಂದು ಲಿಖಿತ ಪರೀಕ್ಷೆ ನಿಗದಿಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

1789 ವಿಶೇಷ ಮೀಸಲು ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಗಳ ಪೈಕಿ 334 ಕಲ್ಯಾಣ ಕರ್ನಾಟಕಕ್ಕೆ, 1,455 ಉಳಿದ ಭಾಗಕ್ಕೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. 161 ವಿಶೇಷ ಮೀಸಲು ಪೊಲೀಸ್ ಕಾನ್ಸ್‌ ಟೇಬಲ್(ಸಿವಿಲ್) ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮೀಸಲಿಟ್ಟಿದ್ದು, ಈಗ ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. 364 ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಟ್ಟಿದ್ದು, ಅಧಿಸೂಚನೆ ಸಿದ್ಧವಿದೆ. ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ಪ್ರಿಯಾಂಕ್ ಖರ್ಗೆ ಎಂದು ಅವರು ತಿಳಿಸಿದ್ದಾರೆ.

 ‘ಪೊಲೀಸ್ ಇಲಾಖೆಗೆ ಸಂಬಂಧಿಸಿ ಒಟ್ಟಾರೆ 7,925 ಹುದ್ದೆಗಳ ಪೈಕಿ, 1,639 ಕಲ್ಯಾಣ ಕರ್ನಾಟಕಕ್ಕೆ, 6,286 ಉಳಿದ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ’

-ಪ್ರಿಯಾಂಕ್ ಖರ್ಗೆ, ಗೃಹ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News