ವಿಧಾನ ಪರಿಷತ್ ಸದಸ್ಯರಾಗಿ ಬಿ.ಕೆ.ಹರಿಪ್ರಸಾದ್, ರಘು ಕೌಟಿಲ್ಯ ಸಹಿತ 7 ಮಂದಿ ಪ್ರಮಾಣವಚನ ಸ್ವೀಕಾರ
Update: 2026-07-02 14:57 IST
ಬೆಂಗಳೂರು : ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ, ತಿಪ್ಪಣ್ಣಪ್ಪ ಕಮಖನೂರ್ ಹಾಗೂ ವಿನಯ್ ಕಾರ್ತಿಕ್, ಬಿಜೆಪಿಯ ಕೌಟಿಲ್ಯ ರಘು ಹಾಗೂ ಲಿಂಗರಾಜ ಪಾಟೀಲ್ ಅವರು ಗುರುವಾರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸಿಎಂ ಡಿ ಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ಉಪಸ್ಥಿತರಿದ್ದರು.