×
Ad

ಐದು ಪಾಲಿಕೆಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ: ಮಹೇಶ್ವರ್ ರಾವ್

‘ಧನ್ವಂತರಿ ಪ್ರಶಸ್ತಿ ಪ್ರದಾನ’

Update: 2026-07-02 22:52 IST

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗಾಗಿ ಸತತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ಪಾಲಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆರೋಗ್ಯಾಧಿಕಾರಿಗಳು, ಅಧಿಕ್ಷಕರು, ಆರೋಗ್ಯ ವೈದ್ಯಾಧಿಕಾರಿ, ವೈದ್ಯರಿಗೆ ಗುರುವಾರ ನಗರದಲ್ಲಿ ನಡೆದ ಧನ್ವಂತರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಜನನ ಪ್ರಮಾಣ ಉತ್ತಮವಾಗಿರಬೇಕು, ಮರಣ ಪ್ರಮಾಣ ಕಡಿಮೆಯಾಗಬೇಕೆಂದರೆ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಮತ್ತು ಆಹಾರ ಪದ್ದತಿ ಹಾಗೂ ಆಧುನಿಕ ಔಷಧಿಗಳ ಶೋಧನೆಯಾಗಬೇಕು ಎಂದು ಮಹೇಶ್ವರ್ ರಾವ್ ಹೇಳಿದರು.

ನಮ್ಮ ಆಸ್ಪತ್ರೆಗಳು ಉತ್ತಮ ಗುಣಮಟ್ಟದಲ್ಲಿ ಇದ್ದು, ಅದಕ್ಕೆ ವೈದ್ಯರು ಸಹಕಾರ ಬೇಕು. ಪಂಚ ಪಾಲಿಕೆಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆ ಸತತ ಕ್ರಮ ಕೈಗೊಳ್ಳಲಾಗುತ್ತಿದೆ. ಉತ್ತಮ ವೈದ್ಯಕೀಯ ಸೌಲಭ್ಯ ನಾಗರಿಕರಿಗೆ ಸಿಗಬೇಕು ಮಹೇಶ್ವರ್ ರಾವ್ ಅಭಿಪ್ರಾಯಪಟ್ಟರು.

ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಮಾತನಾಡಿ, ಡಾ.ಬಿಧಾನ್ ಚಂದ್ರರಾಯ್ ರವರ ಸವಿನೆನಪಿನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಚರಿಸಲಾಗುತ್ತಿದೆ. ಪ್ರಾಣವನ್ನು ಪಣಕ್ಕಿಟ್ಟು ಕೋವಿಡ್ ಸಂದರ್ಭದಲ್ಲಿ ವೈದ್ಯರು ತುಂಬಾ ಒಳ್ಳೆಯ ಕೆಲಸ ಮಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಆಸ್ಪತ್ರೆಗಳನ್ನು ಹೈಟೆಕ್ ಆಸ್ಪತ್ರೆಗಳಾಗಿ ಮಾಡಲು ತಾವೆಲ್ಲರೂ ಸಹಕಾರ ಕೊಡಿ ಎಂದು ಹೇಳಿದರು.

ಜಿಬಿಎ ವಿಶೇಷ ಆಯುಕ್ತ ವೆಂಕಟಚಲಪತಿ ಮಾತನಾಡಿ, ಕೊವಿಡ್ ಸಂದರ್ಭದಲ್ಲಿ ವೈದ್ಯರು ಜೀವನ ಹಂಗು ತೊರೆದು ಕೆಲಸ ಮಾಡಿದರು ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುವ ಸೌಭಾಗ್ಯ ನನ್ನದಾಗಿತ್ತು ಎಂದು ಹೇಳಿದರು.

ಈ ವೇಳೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಮುಖ್ಯ ಆರೋಗ್ಯಧಿಕಾರಿಗಳಾದ ಡಾ.ಸೈಯದ್ ಸಿರಾಜುದ್ದೀನ್ ಮದನಿ, ಡಾ.ನಿರ್ಮಲ ಬುಗ್ಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಧನ್ವಂತರಿ ಪ್ರಶಸ್ತಿ ಪುರಸ್ಕೃತರು..!

1) ಡಾ.ಮನೋರಂಜನ್ ಹೆಗ್ಡೆ, ಆರೋಗ್ಯಧಿಕಾರಿ

1)ಡಾ.ಲತಾ ಎಫ್.ಜೆ., ವೈದ್ಯಕೀಯ ಅಧೀಕ್ಷಕರು,

3)ಡಾ.ಟಿ.ವೆಂಕಟೇಶ್, ಆರೋಗ್ಯ ವೈದ್ಯಾಧಿಕಾರಿ

4) ಡಾ.ಮಂಜುಳ ಡಿ., ವೈದ್ಯಕೀಯ ಅಧೀಕ್ಷಕರು.

5) ಡಾ.ಕೋಮಲ ಕೆ.ಆರ್., ಆರೋಗ್ಯ ವೈದ್ಯಾಧಿಕಾರಿ

6) ಡಾ.ಲಲಿತಾ, ವೈದ್ಯಕೀಯ ಅಧೀಕ್ಷಕರು

7)ಡಾ.ಮಂಜುಳ ಡಿ, ಆರೋಗ್ಯ ವೈದ್ಯಾಧಿಕಾರಿ

8) ಡಾ.ಭಾರತಿ ಜೆ.ಪಿ. ವೈದ್ಯಕೀಯ ಅಧೀಕ್ಷಕರು.

9) ಡಾ.ನವೀನ್ ಕುಮಾರ್, ವೈದ್ಯಾಧಿಕಾರಿ

10) ಡಾ.ರಾಜೇಶ್ ಎನ್, ವೈದ್ಯಾಧಿಕಾರಿ

11) ಡಾ.ಅನುಪಮಾ ಜಿ.ವೈದ್ಯಾಧಿಕಾರಿ

12) ಡಾ.ಅನುಪಮಾ ಸಿ.ವಿ. ಅರವಳಿಕೆ ತಜ್ಞರು.

13) ಡಾ.ಸುಜಾತ, ನಗರ ಆರೋಗ್ಯ ಪ್ರಾಥಮಿಕ ಕೇಂದ್ರ.

14) ಡಾ.ವಿ.ಜಿ.ನವೀನ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News