ರೇಣುಕಾಸ್ವಾಮಿ 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ‌ ಪ್ರಕರಣ ಸಂಬಂಧ ಇಂದು 59 ಸಿಸಿಹೆಚ್ ನ್ಯಾಯಾಲಯದಲ್ಲಿ ಪ್ರಕರಣದ ಪತ್ಯಕ್ಷ ಸಾಕ್ಷಿಗಳ ಸಾಕ್ಷ್ಯ ದಾಖಲು ಮಾಡುವ ಪ್ರಕ್ರಿಯೆ ನಡೆಯಲಿದೆ.

ಪ್ರಕರಣದಲ್ಲಿ ಪತ್ಯಕ್ಷ ಸಾಕ್ಷಿ(ಐ ವಿಟ್ನೆಸ್)ಗಳಾದ ಪುನೀತ್ ಹಾಗೂ ಕಿರಣ್ ಅವರು ಸಾಕ್ಷ್ಯ ನುಡಿಯಲು ಈಗಾಗಲೇ ಸಮನ್ಸ್ ಜಾರಿ‌ ಮಾಡಿದ್ದು ಇಂದು ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ಕೋರ್ಟ್ ಗೆ ಹಾಜರಾಗಲಿದ್ದಾರೆ.

ಕಿರಣ್ ಹಾಗೂ ಪುನೀತ್ ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ಶೆಡ್ ನಲ್ಲಿ ಕೆಲಸಗಾರರು ಎನ್ನಲಾಗಿದೆ. ಕೊಲೆ ನಡೆದ ದಿನ ಇಬ್ಬರು ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರು ಕೃತ್ಯವನ್ನ ಕಣ್ಣಾರೆ ನೋಡಿದ್ದರು ಎಂದು ತಿಳಿದು ಬಂದಿದೆ.

ಇಬ್ಬರ ಹೇಳಿಕೆಗಳನ್ನು ಈಗಾಗಲೇ ಚಾರ್ಜ್ ಶೀಟ್ ಭಾಗವಾಗಿ ಸಿಆರ್ ಪಿಸಿ 164 ಅಡಿಯಲ್ಲಿ‌ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಲಾಗಿದೆ. ಇಂದು ವಿಚಾರಣಾ ನ್ಯಾಯಾಲಯದಲ್ಲಿ ಇವರ ಸಾಕ್ಷ್ಯವನ್ನ ದಾಖಲು ಮಾಡಲಾಗುವುದು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor