×
Ad

ಬೆಂಗಳೂರು ಟ್ರಾಫಿಕ್ | ʼಸ್ನೇಹಿತೆ ದುಬೈ ತಲುಪಿದಳು, ನಾನಿನ್ನೂ ಸಂಚಾರ ದಟ್ಟನೆಯಲ್ಲೇ ಸಿಲುಕಿದ್ದೇನೆʼ : ಪೋಸ್ಟ್‌ ವೈರಲ್

Update: 2025-07-21 21:41 IST

Screengrab from the video | PC: Instagram

ಬೆಂಗಳೂರು : ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಟ್ರಾವೆಲ್ ಬ್ಲಾಗರ್‌ವೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋ ಮತ್ತು ತಮಾಷೆಯ ಟಿಪ್ಪಣಿಯು ವೈರಲ್ ಆಗಿದೆ. ಅದಕ್ಕೆ ನೂರಾರು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮದೇ ಆದ ಟ್ರಾಫಿಕ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಕಿಕ್ಕಿರಿದ ರಸ್ತೆಯ ದೃಶ್ಯವೊಂದನ್ನು ಪೋಸ್ಟ್ ಮಾಡಿ, "ನಾನು ಇನ್ನೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿಡಿದ್ದೇನೆ. ಏರ್‌ ಪೋರ್ಟ್‌ ನಲ್ಲಿ ಡ್ರಾಪ್‌ ಮಾಡಿ ಬಂದ, ನನ್ನ ಸ್ನೇಹಿತೆ ದುಬೈ ತಲುಪಿಯಾಗಿದೆ" ಎಂದು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್ ಗೆ ನಾಲ್ಕು ದಿನಗಳಲ್ಲಿ ಸಾವಿರಾರು ಲೈಕ್ ಮತ್ತು ಕಾಮೆಂಟ್‌ ಗಳು ಬಂದಿದೆ.

ಬ್ಲಾಗರ್‌ನ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಿವಾಸಿಯೊಬ್ಬರು, ತಮಗಾದ ಅದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಮಾಲೆ(ಮಾಲ್ಡೀವ್ಸ್)ಯಿಂದ ವಿಮಾನ ನಿಲ್ದಾಣಕ್ಕೆ ಹೊರಟೆ. ಚೆಕ್-ಇನ್ ಮುಗಿಸಿದ ಮೇಲೆ ನನ್ನ ಗೆಳತಿಗೆ ಕರೆ ಮಾಡಿದೆ, ಅಷ್ಟರಲ್ಲಿ ಅವಳು ಮನೆಯಿಂದ ಹೊರಟಿದ್ದಳು. ನಾನು ಬೆಂಗಳೂರಿನಲ್ಲಿ ವಿಮಾನದಿಂದ ಇಳಿದು ಬ್ಯಾಗ್ ತೆಗೆದುಕೊಂಡು ಹೊರಬಂದೆ, ಆದರೆ ಅವಳು ಇನ್ನೂ ಟ್ರಾಫಿಕ್‌ನಲ್ಲಿದ್ದಳು,” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಅನುಭವವನ್ನು ಹಂಚಿಕೊಂಡಿರುವ ಇನ್ನೊಬ್ಬ ಬಳಕೆದಾರು, “ನನ್ನ ಪೋಷಕರು ನನ್ನನ್ನು ಏರ್‌ ಪೋರ್ಟ್‌ ನಲ್ಲಿ ಡ್ರಾಪ್‌ ಮಾಡಿ ಹೋದರು. ನಾನು ದಿಲ್ಲಿಯಲ್ಲಿ ಇಳಿದಾಗ, ಅವರು ಆಗಷ್ಟೇ ಮನೆಗೆ ತಲುಪಿದ್ದರು,” ಎಂದು ಹೇಳಿಕೊಂಡಿದ್ದಾರೆ.

ಮತ್ತೊಬ್ಬರು ʼಈ ಸಮಸ್ಯೆಯು ಕೇವಲ ಬೆಂಗಳೂರಿನದ್ದಲ್ಲ. ಎಲ್ಲ ನಗರಗಳೂ ಹೀಗೆಯೇ ಎಂದು ಕಮೆಂಟ್‌ ಮಾಡಿದ್ದಾರೆ. ಅವರು ಹೈದರಾಬಾದ್‌ ನ ಅನುಭವನ್ನು ಹಂಚಿಕೊಂಡಿದ್ದಾರೆ. “ಒಂದು ಇಂಟರ್-ಆಫೀಸ್ ಬಸ್ 6:30ಕ್ಕೆ ಹೊರಟು ಕೇವಲ 1.9 ಕಿ.ಮೀ ದೂರದ ಕಚೇರಿಗೆ 7:10ಕ್ಕೆ ತಲುಪಿತು. ನಾವು ಕೆಲವರು ನಡೆದು 20 ನಿಮಿಷದಲ್ಲಿ ತಲುಪಿದ್ದೆವು. ಇದು ಎಲ್ಲ ನಗರಗಳ ಕಥೆ,” ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News