×
Ad

ಪಿಜಿಯಲ್ಲಿ ಯುವತಿಯರ ಸ್ನಾನದ ವಿಡಿಯೋ ಚಿತ್ರೀಕರಣ: ಆರೋಪಿ ಸೆರೆ

Update: 2023-06-25 20:41 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.25: ಪಿಜಿಗಳಲ್ಲಿ ವಾಸವಿರುವ ಯುವತಿಯರು ಸ್ನಾನ ಗೃಹದಲ್ಲಿರುವ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕನಾಗಿದ್ದು, ಮಹದೇವಪುರ ವ್ಯಾಪ್ತಿಯ ಹೂಡಿಯಲ್ಲಿರುವ ಪಿಜಿಯಲ್ಲಿ ವಾಸವಿದ್ದ ಈ ಆರೋಪಿಯು, ಖಾಸಗಿ ಬ್ಯಾಂಕ್‍ನಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ತಾನು ವಾಸಿಸುತ್ತಿದ್ದ ಪಿಜಿ ಮುಂಭಾಗದಲ್ಲೇ ಮಹಿಳಾ ಪಿಜಿ ಇದೆ ಎನ್ನಲಾಗಿದೆ.

ಮಹಿಳಾ ಪಿಜಿಯ ಸ್ನಾನಗೃಹಕ್ಕೆ ಯಾರಾದರೂ ಸ್ನಾನ ಮಾಡಲು ಬರುತ್ತಿದ್ದಂತೆ ಸ್ನಾನಗೃಹದ ವೆಂಟಿಲೇಷನ್ ಸ್ಥಳದಿಂದ ಯುವತಿಯರು ಸ್ನಾನ ಮಾಡುತ್ತಿದ್ದ ದೃಶ್ಯಗಳನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. ಇದೇ ರೀತಿ ಸ್ನಾನಗೃಹದ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರೇ ಹಿಡಿದು ಮಹದೇವಪುರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊಬೈಲ್ ಪರಿಶೀಲಿಸಿದಾಗ ಯುವತಿಯರ ಸ್ನಾನಗೃಹದ ಒಟ್ಟು ಏಳು ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಮೂರು-ನಾಲ್ಕು ತಿಂಗಳಿಂದ ಆರೋಪಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ. ವಿಡಿಯೋ ಮಾಡಿ ಯುವತಿಯರಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಲೇಡಿಸ್ ಪಿಜಿಯಲ್ಲಿರುವವರನ್ನು ವಿಚಾರಿಸುತ್ತೇವೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News