×
Ad

WPL ಹಿನ್ನೆಲೆ | ಮೆಟ್ರೊ ಸೇವೆಗಳ ಅವಧಿ ವಿಸ್ತರಣೆ

Update: 2025-02-20 23:19 IST

ಬೆಂಗಳೂರು: ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ 2025 ಬೆಂಗಳೂರು ಪಂದ್ಯಗಳಿಗೆ ಮೆಟ್ರೋ ರೈಲು ಸೇವೆಗಳ ವಿಸ್ತರಣೆಯನ್ನು ವಿಸ್ತರಿಸಲಾಗಿದೆ.

ಟಾಟಾ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳು ಬೆಂಗಳೂರಿನಲ್ಲಿ ಫೆಬ್ರವರಿ 21, 22, 24, 25, 26, 27, 28 ಮತ್ತು ಮಾರ್ಚ್ 1, ರಂದು ನಡೆಯಲಿವೆ. ಕ್ರಿಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ, ಬಿ.ಎಂ.ಆರ್.ಸಿ.ಎಲ್ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಿದೆ.

ನೇರಳೆ ಮತ್ತು ಹಸಿರು ಮಾರ್ಗಗಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೊ ನಿಲ್ದಾಣಗಳಾದ ಚಲ್ಲಘಟ್ಟ, ವೈಟ್‍ಫೀಲ್ಡ್ ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ಸೇವೆ ರಾತ್ರಿ 11: 20 ರವರೆಗೆ ಮತ್ತು ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11: 55 ಕ್ಕೆ ಹೊರಡುತ್ತವೆ. ಪ್ರಯಾಣಿಕರು ಮೆಟ್ರೊ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‍ಗಳು, ಸ್ಮಾರ್ಟ್ ಕಾರ್ಡ್‍ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‍ಗಳು (ಎನ್‍ಸಿಎಂಸಿ) ಮತ್ತು ಟೋಕನ್‍ಗಳನ್ನು ಬಳಸಿ ಪ್ರಯಾಣಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News