×
Ad

ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಬಣಕ್ಕೆ ಮೇಲುಗೈ

Update: 2025-10-20 00:01 IST

ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಸ್ಥಾನಗಳ ಚುನಾವಣೆಯು ರವಿವಾರ ನಡೆದಿದ್ದು, ರಾಜಕೀಯ ಕಾವು ಹೆಚ್ಚಿಸಿತು. ಒಟ್ಟು 16 ಸ್ಥಾನಗಳಲ್ಲಿ 9 ನಿರ್ದೇಶಕರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ 7 ಸ್ಥಾನಗಳಿಗೆ ಮತದಾನ ನಡೆಯಿತು. ಅದರಲ್ಲಿ ಮೂರು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ.

ಅಥಣಿ ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸವದಿ 122 ಮತಗಳನ್ನು ಪಡೆದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ (3 ಮತ) ಅವರನ್ನು ಭಾರೀ ಅಂತರದಿಂದ ಸೋಲಿಸಿದರು. ರಾಮದುರ್ಗದಲ್ಲಿ ಮಲ್ಲಣ್ಣ ಯಾದವಾಡ (19 ಮತ) ಅವರು ಶ್ರೀಕಾಂತ ಢವಣ (16 ಮತ) ಅವರನ್ನು ಸೋಲಿಸಿ ವಿಜಯಶಾಲಿಯಾಗಿದರು.

ರಾಯಭಾಗದಲ್ಲಿ ಬ್ಯಾಂಕಿನ ಹಾಲಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ 120 ಮತ ಪಡೆದು ಬಸಗೌಡ ಆಸಂಗಿ (64 ಮತ) ಅವರನ್ನು ಸೋಲಿಸಿದರು. ನಿಪ್ಪಾಣಿ (ಅಣ್ಣಾಸಾಹೇಬ ಜೊಲ್ಲೆ), ಹುಕ್ಕೇರಿ (ರಮೇಶ ಕತ್ತಿ), ಬೈಲಹೊಂಗಲ (ಮಹಾಂತೇಶ ದೊಡ್ಡಗಡರ) ಹಾಗೂ ಚನ್ನಮ್ಮನ ಕಿತ್ತೂರು (ನಾನಾಸಾಹೇಬ ಪಾಟೀಲ) ಕ್ಷೇತ್ರಗಳ ಫಲಿತಾಂಶವನ್ನು ಅಕ್ಟೋಬರ್ 28ರವರೆಗೆ ಪ್ರಕಟಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಬಣ ಮೇಲುಗೈ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News