BELAGAVI | ದಲಿತ ಸಿಎಂ ಚರ್ಚೆ ಬಗ್ಗೆ: ಪ್ರತಿಕ್ರಿಯಿಸಲು ನಿರಾಕರಿಸಿದ ಗೃಹಸಚಿವ ಪರಮೇಶ್ವರ್
Update: 2025-11-26 13:19 IST
ಬೆಳಗಾವಿ: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ, ಅದರಲ್ಲೂ ಮುಖ್ಯಮಂತ್ರಿ ವಿಚಾರ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಏನೂ ಮಾತನಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ದಲಿತ ಸಿಎಂ ಚರ್ಚೆ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಸೈಲೆಂಟ್ ಪ್ರತಿಕ್ರಿಯಿಸಲು ನಿರಾಕರಿಸಿದ ಗೃಹಸಚಿವರು “ಥ್ಯಾಂಕ್ಯೂ, ಥ್ಯಾಂಕ್ಯೂ” ಎಂದಷ್ಟೇ ಹೇಳಿ ಹೋದರು.
ಮಾಜಿ ಶಾಸಕ ರಾಜು ಹಲಗೂರು ಅವರ ಮಗಳ ಮದುವೆಯಲ್ಲಿ ಭಾಗಿಯಾಗುವುದಕ್ಕಾಗಿ ವಿಜಯಪುರಕ್ಕೆ ತೆರಳುತ್ತಿದ್ದೇನೆ. ಅಲ್ಲಿಂದ ಹಿಂದಿರುಗಿದ ಬಳಿಕ ಬೆಳಗಾವಿ ಚಳಿಗಾಲದ ಅಧಿವೇಶನ ಸಿದ್ಧತೆ ಪರಿಶೀಲನೆಗೆ ಆಗಮಿಸುತ್ತೇನೆ. ಅಧಿವೇಶನ ಸಮಯದಲ್ಲಿ ನಡೆಯುವ ಪ್ರತಿಭಟನೆ–ಕಾನೂನು ಸುವ್ಯವಸ್ಥೆ ಕುರಿತ ಸಿದ್ಧತೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು
ದಲಿತ ಸಿಎಂ ಪ್ರಶ್ನೆ ಕೇಳುತ್ತಿದ್ದಂತೆಯೇ “ಥ್ಯಾಂಕ್ಯೂ, ಥ್ಯಾಂಕ್ಯೂ… ಮಧ್ಯಾಹ್ನ ಬಂದ ಬಳಿಕ ಮಾತಾಡ್ತಿನಿ” ಎಂದು ಹೇಳಿ ಗೃಹಸಚಿವರು ಹೊರಟರು.