Belagavi | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಅತಿಥಿ ಉಪನ್ಯಾಸಕನ ಬಂಧನ
Update: 2025-12-01 12:38 IST
ಸಾಂದರ್ಭಿಕ ಚಿತ್ರ | Photo Credit : freepik.com
ಬೆಳಗಾವಿ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಇಲ್ಲಿನ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕನನ್ನು ಕ್ಯಾಂಪ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಸವನ ಕುಡಚಿಯ ನಾಗೇಶ್ವರ ದೇಮಿನಕೊಪ್ಪ ಬಂಧಿತ ಆರೋಪಿ.
‘ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ನಾಗೇಶ್ವರ ಅತ್ಯಾಚಾರವೆಸಗಿದ್ದ. ಈ ವಿಷಯ ಬಹಿರಂಗಪಡಿಸದಂತೆ ಜೀವ ಬೆದರಿಕೆ ಹಾಕಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.