ನಾನು ಯಾವುದನ್ನು ಕೇಳಿ ಪಡೆದುಕೊಂಡಿಲ್ಲ: ಲಕ್ಷ್ಮಣ್ ಸವದಿ
Update: 2025-10-26 20:27 IST
ಬೆಂಗಳೂರು : ನಾನು ಯಾವಾಗಲೂ ಯಾವುದನ್ನೂ ಕೇಳಿ ಪಡೆದುಕೊಂಡಿಲ್ಲ. ಸಚಿವ ಸ್ಥಾನ ಹೈಕಮಾಂಡ್ ಇಚ್ಛೆ, ಅವರು ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ರವಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಮುಖ್ಯಮಂತ್ರಿ ಎಂಬುದು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚುನಾವಣೆ ನಡೆಯುತ್ತಿದೆ. ಐದು ವರ್ಷದ ಆಡಳಿತ ಮಂಡಳಿ ರಚನೆಗೆ ಮತದಾನ ಪ್ರಾರಂಭವಾಗಿದೆ. ಶಾಸಕ ರಾಜು ಕಾಗೆ ಹಾಗೂ ನನ್ನ ನೇತೃತ್ವದಲ್ಲಿ ರೈತ ಸಹಕಾರಿ ಪೆನಲ್ ಗೆಲುವಿಗೆ ಮನವಿ ಮಾಡಿದ್ದೇವೆ. ನಾನು ಈ ಚುನಾವಣೆ ಕುರಿತು ಪ್ರಚಾರ ಮಾಡಿದ್ದೇನೆ. ರೈತರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ಆತ್ಮವಿಶ್ವಾಸವಿದೆ ಎಂದರು.