ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ : ನಾಲ್ವರು ಅವಿರೋಧ ಆಯ್ಕೆ
ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಶನಿವಾರ ಅಂತಿಮ ದಿನವಾಗಿದ್ದು, ರಂಗೇರುತ್ತಿದ್ದ ರಾಜಕೀಯ ಪೈಪೋಟಿಗೆ ಇಂದು ಹೊಸ ತಿರುವು ಸಿಕ್ಕಿದೆ. ನಾಲ್ಕು ತಾಲ್ಲೂಕುಗಳಿಂದ ತಲಾ ಒಬ್ಬ ಅಭ್ಯರ್ಥಿಯೇ ನಾಮಪತ್ರ ಸಲ್ಲಿಸಿರುವುದರಿಂದ, ಅವರ ಅವಿರೋಧ ಆಯ್ಕೆ ಖಚಿತವಾಗಿದೆ.
ಅದರಲ್ಲೂ ಮೂವರು ಜಾರಕಿಹೊಳಿ ಕುಟುಂಬದ ಪೆನಲ್‌ನಿಂದ ಸ್ಪರ್ಧಿಸಿದ್ದು, ಪ್ರಾರಂಭದಲ್ಲೇ ಜಾರಕಿಹೊಳಿ ಅವರ ಬಣಕ್ಕೆ ಬಲಿಷ್ಠ ಮುನ್ನಡೆ ದೊರಕಿದೆ.
ಅವಿರೋಧ ಆಯ್ಕೆಯಾಗಬಹುದಾದ ನಾಲ್ವರು ಅಭ್ಯರ್ಥಿಗಳು :
• ಸವದತ್ತಿ: ವಿರೂಪಾಕ್ಷ ಮಾಮನಿ
• ಯರಗಟ್ಟಿ: ವಿಶ್ವಾಸ ವೈದ್ಯ
• ಗೋಕಾಕ್: ಅಮರನಾಥ ಜಾರಕಿಹೊಳಿ
• ಚಿಕ್ಕೋಡಿ: ಗಣೇಶ ಹುಕ್ಕೇರಿ (ಸ್ವತಂತ್ರ, ಯಾವುದೇ ಬಣಕ್ಕೆ ಸೇರಿಲ್ಲ)
ಈ ನಾಲ್ವರಲ್ಲಿ ಮೂವರು ಜಾರಕಿಹೊಳಿ ಪೆನಲ್‌ಗೆ ಸೇರಿದವರಾಗಿದ್ದು, ಗಣೇಶ ಹುಕ್ಕೇರಿ ಮಾತ್ರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ರವಿವಾರ ನಾಮಪತ್ರಗಳ ಪರಿಷ್ಕರಣೆ ನಡೆಯಲಿದ್ದು, ಸುಮಾರು 40 ಅಭ್ಯರ್ಥಿಗಳಿಂದ 70 ನಾಮಪತ್ರಗಳು ಸಲ್ಲಿಕೆಯಾಗಿದೆ. ನಾಮಪತ್ರ ಪರಷ್ಕರಣೆ ನಂತರವಷ್ಟೇ ಅವಿರೋಧ ಆಯ್ಕೆಯೆಂದು ಪರಿಗಣಿಸಲಾಗುವದು.
ಬೆಳಗಾವಿ ತಾಲ್ಲೂಕಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದು, ಆರಂಭದಲ್ಲಿ ಪ್ರತಿಸ್ಪರ್ಧಿ ಯಾರೂ ಇಲ್ಲ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಗಜಾನನ ಕಾಗಣೇಕರ್ ಎಂಬವರು ನಾಮಪತ್ರ ಸಲ್ಲಿಸಿದ್ದು, ಅಲ್ಪಮಟ್ಟಿನ ಕುತೂಹಲ ಉಂಟುಮಾಡಿದೆ.