×
Ad

ಬೈಲಹೊಂಗಲ | ಸಾರಿಗೆ ಬಸ್-ಮಿನಿ ಲಾರಿ ನಡುವೆ ಅಪಘಾತ; ಹಲವರಿಗೆ ಗಾಯ

Update: 2025-08-24 13:30 IST

ಬೆಳಗಾವಿ : ಸಾರಿಗೆ ಬಸ್ ಹಾಗೂ ಮಿನಿ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ರವಿವಾರ ನಡೆದಿದೆ.

ಬೈಲಹೊಂಗಲ ತಾಲೂಕಿನ ತಿಗಡಿ- ತಿಗಡಿ ಕ್ರಾಸ್ ಮಧ್ಯೆ ಈ ಘಟನೆ ಸಂಭವಿಸಿದೆ. ತಿಗಡಿ ಕಡೆಯಿಂದ ಬೈಲಹೊಂಗಲದ ಕಡೆಗೆ ಪ್ರಯಾಣಿಕರನ್ನು ಹೊತ್ತ ಸಾರಿಗೆ ಬಸ್ ಸಂಚರಿಸುತ್ತಿತ್ತು. ಇದೇ ಸಮಯಕ್ಕೆ ತಿಗಡಿ ಕ್ರಾಸ್ ಕಡೆಯಿಂದ ಎದುರಿಗೆ ಬಂದ ಇಟ್ಟಿಗೆ ತುಂಬಿದ್ದ ಮಿನಿ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಇನ್ನೂ ಮಿನಿ ಲಾರಿಯೂ ಜಖಂ ಆಗಿದ್ದು, ಲಾರಿ ಚಾಲಕ ಸೇರಿದಂತೆ ಇನ್ನೂಳಿದವರಿಗೂ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ.

ಈ ಅಪಘಾತದಿಂದ ಎರಡು ವಾಹನಗಳು ನಡುರಸ್ತೆಯಲ್ಲಿ ನಿಂತಿದ್ದರಿಂದ ಇನ್ನೂಳಿದ ವಾಹನ ಸವಾರರಿಗೂ ಸಂಚಾರಕ್ಕೆ ತೀವ್ರ ತೊಂದರೆ ಆಯಿತು. ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News