ಬೈಲಹೊಂಗಲ: ಕಬ್ಬಿನ ದರ ನಿಗದಿಗಾಗಿ ತೀವ್ರಗೊಂಡ ರೈತರ ಹೋರಾಟ
Update: 2025-11-06 11:59 IST
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಕಬ್ಬು ಬೆಳೆಗಾರರು ತಮ್ಮ ಬೆಳೆಗಳಿಗೆ ನ್ಯಾಯಸಮ್ಮತ ದರ ನೀಡುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಈ ಹೋರಾಟ ಈಗಾಗಲೇ ನಾಲ್ಕನೇ ದಿನ ಪೂರ್ತಿಯಾಗಿದೆ.
ಬೆಳಗಾವಿ ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ರೈತರು ಟನ್‌ಗೆ ₹3500 ಕಬ್ಬಿನ ದರ ನಿಗದಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಹೋರಾಟದಲ್ಲಿ ಪ್ರಮುಖ ರೈತ ಮುಖಂಡರಾದ ಬಸನಗೌಡ ಪಾಟೀಲ, ಭೀರಪ್ಪ ದೇಶನೂರ, ಮಲ್ಲಿಕಾರ್ಜುನ ಹುಂಬಿ, ಬಸವರಾಜ್ ಮೊಕಾಶಿ, ಮಾಜಿ ಶಾಸಕ ವಿಐ ಪಾಟೀಲ ಹಾಗೂ ಶಂಕರ ಮಾಡಲಗಿ ಭಾಗಿಯಾಗಿದ್ದಾರೆ.
ರೈತರು “ಸರ್ಕಾರವು ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ತಕ್ಷಣ ಸ್ಪಂದಿಸಬೇಕು, ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ” ಎಂದು ಎಚ್ಚರಿಸಿದ್ದಾರೆ.