×
Ad

ಬೆಳಗಾವಿ | ರೈಲಿನಲ್ಲಿ ಚಾಕು ಇರಿತ : ಓರ್ವ ಸಿಬ್ಬಂದಿ ಮೃತ್ಯು

Update: 2024-05-16 21:52 IST

ಸಾಂದರ್ಭಿಕ ಚಿತ್ರ | Photo; PTI 

ಬೆಳಗಾವಿ : ಟಿಕೆಟ್ ವಿಚಾರವಾಗಿ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ ನಾಲ್ವರು ಅಪರಿಚಿತ ಮುಸುಕುಧಾರಿ ಪ್ರಯಾಣಿಕರು ಸೇರಿ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಕೋಚ್ ಅಟೆಂಡರ್ ದೇವಋಷಿ ವರ್ಮಾ(23) ಎಂಬುವವರು ಸಾವನ್ನಪ್ಪಿದ್ದಾರೆ.

ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದ್ದು, ನಾಲ್ವರು ಅಪರಿಚಿತ ಮುಸುಕುಧಾರಿ ಪ್ರಯಾಣಿಕರು ಸೇರಿ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಟಿಸಿ ಮತ್ತು ನಾಲ್ವರು ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೂ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಚಿಕಿತ್ಸೆ ಫಲಿಸದೆ ಕೋಚ್ ಅಟೆಂಡರ್ ದೇವಋಷಿ ವರ್ಮಾ(23) ಎಂಬುವವರು ಸಾವನ್ನಪ್ಪಿದ್ದಾರೆ. ಪಾಂಡಿಚೇರಿಯಿಂದ ಮುಂಬಯಿ ಮಾರ್ಗವಾಗಿ ಚಲಿಸುತ್ತಿದ್ದ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನ ಎಸ್ 8 ಬೋಗಿಯಲ್ಲಿ ಟಿಸಿ ಮೇಲಿನ ಹಲ್ಲೆ ತಡೆಯಲು ಹೋಗಿದ್ದ ಕೋಚ್ ಅಟೆಂಡರ್ ಗೆ ಮುಸುಕುಧಾರಿ ಮನಸೋ ಇಚ್ಚೆ ಚಾಕು ಇರಿದಿದ್ದ ಎನ್ನಲಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News