×
Ad

ಬೆಳಗಾವಿ: ಚಲಿಸುತ್ತಿದ ರೈಲಿನಿಂದ ಬಿದ್ದ ವೃದ್ಧನ ರಕ್ಷಣೆ ; RPF ಸಿಬ್ಬಂದಿಯ ಸಾಹಸಕ್ಕೆ ಮೆಚ್ಚುಗೆ

Update: 2025-10-12 13:57 IST

ಬೆಳಗಾವಿ: ರೈಲು ನಿಲ್ದಾಣದಲ್ಲಿ ಚಲಿಸುತ್ತಿದ ರೈಲಿನಿಂದ ಬಿದ್ದ ವೃದ್ಧರೊಬ್ಬರನ್ನು ಕ್ಷಣಾರ್ಧದಲ್ಲಿ RPF ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಜಿಲ್ಲೆಯ ಉಚ್ಚಗಾಂವ ಸಮೀಪದ ಬಸುರತೆ ಗ್ರಾಮದ ನಿವಾಸಿಯಾದ ಬರಮಾ ಗಂಗರಾಮ ಕುಂಬಾರ (55) ಎಂಬುವರು ಬೆಳಗಾವಿ ಯಿಂದ ಪುಣೆಗೆ ತೆರಳುವ ತಮ್ಮ ಮೊಮ್ಮಗನಾದ  ಲಕ್ಷ್ಮಿ ರಾಜಾರಾಮ ಕುಂಬಾರ ಅವರನ್ನು ಮೈಸೂರು–ಅಜ್ಮೀರ್ ಎಕ್ಸ್‌ಪ್ರೆಸ್ ರೈಲಿಗೆ ( ಸಂಖ್ಯೆ16210) ಬೀಳ್ಕೊಡಲು ಬಂದಿದ್ದರು.

ರೈಲು ಹತ್ತಿದ್ದ ಅವರು ಇಳಿಯುವ ಹೊತ್ತಿಗೆ ರೈಲು ಚಲಿಸಲು ಪ್ರಾರಂಭಸಿದಾಗ ಬೀಳ್ಕೊಡಲು ಬಂದ ಅವರು ಆತಂಕಗೊಂಡು ಚಲಿಸುತ್ತಿರುವ ರೈಲಿನಿಂದ ಇಳಿಯಲು ಯತ್ನಿಸಿದಾಗ  ಜಾರಿಬಿದ್ದು, ಪ್ಲಾಟ್ಫಾರ್ಮ್ ಹಾಗೂ ರೈಲಿನ ನಡುವೆ ಚಿಕ್ಕ ಜಾಗದಲ್ಲಿ ಸಿಲುಕಿಕೊಂಡರು. ಇದನ್ನು ಕರ್ತವ್ಯ ನಿರತ RPF ಹೆಡ್ ಕಾನ್ಸ್ಟೇಬಲ್ C.I. ಕೊಪ್ಪದ ಗಮನಿಸಿ ತಕ್ಷಣ, ಧೈರ್ಯದಿಂದ ಮುನ್ನುಗ್ಗಿ ರಕ್ಷಿಸಿದರು. ನಂತರ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಹೆಡ್ ಕಾನ್ಸ್ಟೇಬಲ್ ಸಿ. ಐ. ಕೊಪ್ಪದ ಅವರ ಸಮಯಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆ ಯಿಂದ ಅನಾಹುತ ತಪ್ಪಿದ್ದು, ಇವರ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. RPF ಹೆಡ್ ಕಾನ್ಸ್ಟೇಬಲ್ ಸಿ. ಐ. ಕೊಪ್ಪದ ಸದ್ಯ ಬೆಳಗಾವಿ RPF ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News