×
Ad

ಸದನದಲ್ಲಿ ಸ್ಪೀಕರ್ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ

Update: 2025-12-10 13:41 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಾಯಿ ತಪ್ಪಿ ಖಾದರ್ ಅವರೇ ಎಂದು ಸ್ಪೀಕರ್ ಯು.ಟಿ.ಖಾದರ್ ಅವರನ್ನು ಸಂಬೋಧಿಸಿದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಆ ಬಳಿಕ ಕ್ಷಮೆಯಾಚಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಮಂಗಳೂರು ನಗರದಲ್ಲಿ ‘ವಾಣಿಜ್ಯ ಕಚೇರಿ ಟೆಕ್ ಪಾರ್ಕ್’ ಸ್ಥಾಪಿಸುವ ಸಂಬಂಧ ಸರಕಾರವನ್ನು ಪ್ರಶ್ನಿಸುತ್ತಿದ್ದ ವೇಳೆ ಬಾಯಿತಪ್ಪಿ, ‘ಸಭಾಧ್ಯಕ್ಷರ ಬದಲಿಗೆ ಖಾದರ್ ಅವರೇ’ ಎಂದು ಕರೆದರು. ತಕ್ಷಣವೇ ತಪ್ಪಿನ ಅರಿವು ಮಾಡಿಕೊಂಡ ಡಾ.ಭರತ್ ಶೆಟ್ಟಿ ತಕ್ಷಣವೇ ಸ್ಪೀಕರ್ ಅವರೇ ಕ್ಷಮೆ ಇರಲಿ ಎಂದು ಕ್ಷಮೆ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News