×
Ad

ಅಹ್ಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟಿದ್ದ ಡಾ.ಪ್ರತೀಕ್ ಜೋಶಿ ಬೆಳಗಾವಿ ಕೆಎಲ್ಇ ಕಾಲೇಜಿನ ಹಳೇ ವಿದ್ಯಾರ್ಥಿ

Update: 2025-06-13 19:35 IST

ಬೆಳಗಾವಿ : ಅಹ್ಮದಾಬಾದ್‌​ ಏರ್​ಪೋರ್ಟ್ ಬಳಿ ನಡೆದ​ ವಿಮಾನ ದುರಂತದಲ್ಲಿ ಬೆಳಗಾವಿ ಕೆಎಲ್ಇ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದ ವೈದ್ಯ ಡಾ.ಪ್ರತೀಕ್ ಜೋಶಿ ಅವರ ಕುಟುಂಬ ಕೂಡ ಸಾವನ್ನಪ್ಪಿದೆ. ಈ ದುರಂತದಲ್ಲಿ ಮೂವರು ಮಕ್ಕಳು ಮತ್ತು‌ ಪತ್ನಿ ಸಮೇತ ಡಾ.ಪ್ರತೀಕ್ ಜೋಶಿ ಅವರ ಬದುಕು ದುರಂತ ಅಂತ್ಯ ಕಂಡಿದೆ.

ರಾಜಸ್ಥಾನ ‌ಮೂಲದ ಡಾ.ಪ್ರತೀಕ್‌ ಜೋಶಿ ಅವರು, 2000 ದಿಂದ 2005 ನೇ ಬ್ಯಾಚ್‌ನ ಬೆಳಗಾವಿ ಕೆಎಲ್ಇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಎಲ್ಇ ಪ್ರಾಚಾರ್ಯೆ ಡಾ.ನಿರಂಜನಾ ಮಹಾಂತ ಶೆಟ್ಟಿ, ಪ್ರತೀಕ್‌ ಜೋಶಿ ಒಳ್ಳೆಯ ವಿದ್ಯಾರ್ಥಿ ಆಗಿದ್ದ. ಎಲ್ಲರ ಜೊತೆಗೂ ಬೆರೆಯುವ ಗುಣವನ್ನು ಅವನು ಹೋದಿದ್ದ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದ ಪ್ರತೀಕ್‌, ಜೀವನ ಕಟ್ಟಿಕೊಳ್ಳಲು ಕುಟುಂಬ ‌ಸಮೇತ ಲಂಡನ್‌ಗೆ ಹೋಗ್ತಾ ಇದ್ದ. ನನ್ನ ವಿದ್ಯಾರ್ಥಿ ದಾರುಣ ಅಂತ್ಯ ಕಂಡಿದ್ದು, ನಿಜಕ್ಕೂ ‌ಬೇಸರ ತರಿಸಿದೆ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಆಶಿಸುವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲಂಡನ್​ಗೆ ತೆರಳುವ ಮುನ್ನ ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಕುಟುಂಬದೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿಯನ್ನು ಪ್ರತೀಕ್, ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು.

ವಿಮಾನ ಅಪಘಾತದ ಬಳಿಕ ಈ ಸೆಲ್ಪಿ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ಹಲವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News