ರೈತರ ಹೋರಾಟದಲ್ಲಿ ಪ್ರಚೋದನಾತ್ಮಕ ಭಾಷಣ: ವಿವಾದಕ್ಕೆ ಕಾರಣವಾದ ಚುನ್ನಪ್ಪ ಪೂಜಾರಿ ಹೇಳಿಕೆ
Update: 2025-11-06 12:07 IST
ಬೆಳಗಾವಿ: ಕಬ್ಬಿನ ಬೆಲೆ ನಿಗದಿಗಾಗಿ ನಡೆಯುತ್ತಿರುವ ರೈತರ ಹೋರಾಟದ ಮಧ್ಯೆ ಪ್ರತಿಭಟನಾಕಾರ ರೈತ ಚುನ್ನಪ್ಪ ಪೂಜಾರಿ ನೀಡಿದ ಪ್ರಚೋದನಾತ್ಮಕ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿರುವ ಬಗ್ಗೆ ವರದಿಯಾಗಿದೆ.
ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಪೂಜಾರಿ, "ಅಧಿವೇಶನ ಸಮಯದಲ್ಲಿ ಬಂದೂಕು ತಗೊಂದು ಬನ್ನಿ" ಎಂಬ ಮಾತುಗಳನ್ನು ಬಳಸಿ ಜನರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನಾಗರಿಕ ವಲಯ ಹಾಗೂ ಕನ್ನಡ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಪೊಲೀಸರು ಈ ಬಗ್ಗೆ ವರದಿ ಸಂಗ್ರಹಿಸುತ್ತಿದ್ದು, ಪ್ರಚೋದನಾತ್ಮಕ ಭಾಷಣದ ಕುರಿತು ತನಿಖೆ ಆರಂಭಿಸಲು ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.