×
Ad

ಬಳ್ಳಾರಿ | ನ.9 ರಂದು ವಿದ್ಯುತ್ ವ್ಯತ್ಯಯ

Update: 2025-11-07 21:56 IST

ಬಳ್ಳಾರಿ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11 ಕೆವಿಯ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬ್ಯಾಂಕ್-2ರ ಫೀಡರ್ ಎಫ್-34 ರಲ್ಲಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.9 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಗರದ ರೈಲ್ವೆ ಫಸ್ಟ್ ಗೇಟ್, ಕೊರಚ ಸ್ಟ್ರೀಟ್, ಉರ್ದು ಟ್ರೈನಿಂಗ್ ಸ್ಕೂಲ್, ಕಡಪಗೆರೆ, ಟೈಲರ್ ಸ್ಟ್ರೀಟ್, ವಡ್ಡೆ ನಾಗಪ್ಪ ಕಾಲೋನಿ, ತಿಲಕ್ ನಗರ್, ವಿನಾಯಕ ನಗರ, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್ ಬಜಾರ್ ಮೇನ್ ರೋಡ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News