ಬಳ್ಳಾರಿ | ಹಾಲುಮತ ಸಮಾಜದಿಂದ ಭಕ್ತ ಕನಕದಾಸರ ಭವ್ಯ ಮೆರವಣಿಗೆ
ಬಳ್ಳಾರಿ / ಕಂಪ್ಲಿ : ಹಾಲುಮತ ಸಮಾಜದಿಂದ ಭಕ್ತ ಕನಕದಾಸರ 535ನೇ ಜಯಂತ್ಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಸಾಂಗತ್ರಯ ಪಾಠಶಾಲೆಯಿಂದ ಆರಂಭಗೊಂಡು ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಅದ್ದಪ್ಪ ಗುಡಿವರೆಗೆ ತೆರಳಿ, ತದನಂತರ ಬೀರಲಿಂಗೇಶ್ವರ ಗುಡಿಹತ್ತಿರ ಸಮಾವೇಶಗೊಂಡಿತು.
ತಾಷಾರಾಂಡೋಲ್, ಡೊಳ್ಳು ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ತಂಡದ ಡೊಳ್ಳು ಪ್ರದರ್ಶನ ಮೆರವಣಿಗೆ ಮೆರಗು ನೀಡುವ ಜೊತೆಗೆ ಜನರ ಆಕರ್ಷಣೆಗೆ ಪಾತ್ರರಾದರು.
ಮೆರವಣಿಗೆಯದ್ದಕ್ಕೂ ಯುವಕರು ಕುಣಿದು ಸಂಭ್ರಮಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತ ಕನಕದಾಸರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಜೆ.ಎನ್ ಗಣೇಶ, ಹಾಲುಮತ ಸಮಾಜದ ನಗರ ಘಟಕ ಅಧ್ಯಕ್ಷ ಕೆ.ವಸಂತಕುಮಾರ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ಖಜಾಂಚಿ ಬಿ.ಶೇಖರ, ಮುಖಂಡರಾದ ಕೆ.ಯಮ್ಮನೂರಪ್ಪ, ಕೆ.ಹರಿನಾಥ, ಕುರಿ ಹುಸೇನಪ್ಪ, ನೆಲ್ಲೂಡಿ ವಿರೇಶಪ್ಪ ಶಿವಪುರ ರಮೇಶ ಮುತ್ತಣ ಬೀರಲಿಂಗ ವಿರುಪಣ್ಣ ಬಿ.ಲಕ್ಷ್ಮಣ, ಕುರಿ ಮಂಜುನಾಥ, ಬಳ್ಳಾಪುರ ಲಿಂಗಪ್ಪ, ಕೋಟ್ಟಾಲ್‌ಸುಧಾ, ಬಿಂಗಿ ವೆಂಕಟೇಶ ಕುಮಾರ, ಬಲಕುಂದಿ ರಾಜಶೇಖರ, ಕೆ.ರಂಗಪ್ಪ ಮೈಲಾರಿ ಯಲ್ಲಪ್ಪ, ಸೇರಿದಂತೆ ಅನೇಕರಿದ್ದರು.