×
Ad

ಬಳ್ಳಾರಿ | ಭತ್ತದ ಬೆಳೆಯಲ್ಲಿ ದುಂಡಾಣು ಎಲೆ ಚುಕ್ಕಿ ರೋಗ ನಿರ್ವಹಣೆಗೆ ಮುಂಜಾಗ್ರತಾ ಕ್ರಮವಹಿಸಲು ಸಲಹೆ

Update: 2025-10-10 19:45 IST

ಬಳ್ಳಾರಿ : ಜಿಲ್ಲೆಯ ವಿವಿಧೆಡೆ ಮುಂಗಾರು ಹಂಗಾಮಿನಲ್ಲಿ ರೈತರು ವಿವಿಧ ಭತ್ತದ ತಳಿಗಳ ಬೆಳೆದ ಬೆಳೆಯಲ್ಲಿ ದುಂಡಾಣು ಎಲೆ ಚುಕ್ಕಿ ರೋಗ ಕಂಡುಬಂದಿದ್ದು, ನಿರ್ವಹಣೆಗೆ ರೈತರು ಸೂಕ್ತ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಬುಧವಾರ ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡದೊಂದಿಗೆ ಕಂಪ್ಲಿ ತಾಲೂಕಿನ ಸಣಾಪುರ, ಇಟಗಿ, ಮುದ್ದಾಪುರ ಗ್ರಾಮದ ಭತ್ತ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರೊಂದಿಗೆ ಚರ್ಚಿಸಿದ್ದಾರೆ.

ಕೆಲವು ಭಾಗಗಳಲ್ಲಿ ತಡವಾಗಿ ನಾಟಿ ಮಾಡಿದ ಭತ್ತ ಬೆಳೆಯಲ್ಲಿ ಪೊಟ್ಯಾಷ್ ಮತ್ತು ಸತುವಿನ ಕೊರತೆ ಕಂಡು ಬಂದಿದ್ದು, ಪ್ರತಿ ಎಕರೆಗೆ ಪೊಟ್ಯಾಷ್ 12.5 ಕೆ.ಜಿ ಮತ್ತು ಸತುವಿನ ಸಲ್ಪೆಟ್ 4.0 ಕೆ.ಜಿ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಸತುವಿನ ಕೊರತೆ ನೀಗಿಸಬಹುದು.

ಜಿಲ್ಲೆಯ ಸಂಡೂರು ತಾಲ್ಲೂಕಿನ ದರೋಜಿ ಹಾಗೂ ಸುತ್ತಮುತ್ತ ಭಾಗಗಳಲ್ಲಿ ಬೆಳೆಯ ತೆನೆ ಹೊಡೆಯುವ ಹಂತದಲ್ಲಿ ಇದ್ದು, ದುಂಡಾಣು ಮಚ್ಚೆ ರೋಗ ನಿವಾರಣೆಗಾಗಿ ಕಾರ್ಬನ್‌ಡ್ಯೆಜಿಂ 1 ಗ್ರಾಂ ಮತ್ತು 0.5 ಗ್ರಾಂ ಸ್ಟೆಪ್ಟೋಸೈಕ್ಲಿನ್ ಪ್ರತಿ 1 ಲೀ. ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು. ತಡವಾಗಿ ನಾಟಿ ಮಾಡಿರುವ ಬೆಳೆಗೆ ತೆನೆ ಹೊಡೆಯುವ ಮೊದಲು ಬೆಳೆಗೆ 2.5 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.5 ಗ್ರಾಂ. ಸ್ಟೆಪ್ಟೋಸೈಕ್ಲಿನ್ ಪ್ರತಿ 1 ಲೀ. ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು ಎಂದು ಹೇಳಿದ್ದಾರೆ.

ಸಿಂಪಡಣೆ ಆದ 2 ದಿನ ನಂತರ ಬೆಳೆಗೆ ಲಘು ಪೋಷಕಾಂಶಗಳಿಗೆ ಸಿಂಪಡಣೆ ಮಾಡಿದಲ್ಲಿ ಬೆಳೆಯ ಬೆಳವಣಿಗೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ತೀವ್ರತೆಯಲ್ಲಿ 10 ದಿನಗಳ ಅಂತರದಲ್ಲಿ ಕನಿಷ್ಠ 2 ಸಲ ಸಿಂಪಡಣೆ ಮಾಡುವುದು ಸೂಕ್ತ ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News