×
Ad

ಬಳ್ಳಾರಿ | ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಬೀದಿನಾಟಕದ ಮೂಲಕ ಜಾಗೃತಿ

Update: 2026-02-03 20:20 IST

ಬಳ್ಳಾರಿ : ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕ್ಷೇತ್ರ ಪ್ರಚಾರ ಕಾರ್ಯಕ್ರಮದಡಿ ಸೋಮವಾರ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ವಿವಿಧ ಜನಪರ ಯೋಜನೆಗಳ ಕುರಿತು ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರಾದ ತಿಮ್ಮಪ್ಪ ಅವರು ತಮಟೆ ಬಾರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಇಬ್ರಾಹಿಂಪುರ ಚಿಗುರು ಕಲಾತಂಡ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಜನಪರ ಯೋಜನೆಗಳ ಕುರಿತು ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಸರಳವಾಗಿ ವಿವರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಈರಣ್ಣ, ತಿಪ್ಪಯ್ಯ, ಭಾಷಾ ಸಾಬ್, ದುರ್ಗಪ್ಪ, ಸಿದ್ದಪ್ಪ, ನಾಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಲಾವಿದರಾದ ಹುಲುಗಪ್ಪ ಎಸ್.ಎಂ., ಹೆಚ್. ರಮೇಶ್, ಹೆಚ್. ಎರ್ರಿಸ್ವಾಮಿ, ನವೀನ್, ವೆಂಕಟೇಶ್, ಗಂಗಮ್ಮ, ರುತಮ್ಮ, ರಾಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News