ಬಳ್ಳಾರಿ | ಪಲ್ಸ್ ಪೋಲಿಯೋ ಕುರಿತು ಜಾಗೃತಿ ಜಾಥಾ
ಬಳ್ಳಾರಿ / ಕಂಪ್ಲಿ : ಡಿ.21ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಕೋಟೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಜಾಥಾಕ್ಕೆ ಪ್ರಾಥಮಿಕ ಅರೋಗ್ಯ ಮೇಲ್ವಿಚಾರಕರಾದ ಚೆನ್ನಬಸವರಾಜ ಜಾತಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕರ ಹಾಗೂ ಫಲಕಗಳನ್ನು ಹಿಡಿದು ಘೋಷಣೆ ಕೂಗುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಬಡಿಗೇರ್ ಜಿಲಾನಸಾಬ್, ಆಶಾ ಕಾರ್ಯಕರ್ತೆ ಆರ್. ವಲಿಮಾ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಾಮ್ಮ, ಶಾಲಾ ಶಿಕ್ಷಕಿಯರಾದ ಶ್ವೇತಾ, ವರ್ಷಾ ಮಜುಮದಾರ, ಜೆ.ಅಕ್ಷತಾ, ಸುನೀತಾ, ಗೌಸಿಯಾ, ಕಾವ್ಯ, ಉಮಾ ಕೊಲ್ಕರಾ, ಕೆ.ಜಯಶ್ರೀ, ವಿಶ್ವನಾಥ, ಸುಮಂತ ಸೇರಿದಂತೆ ಇತರರು ಹಾಜರಿದ್ದರು.