ಬಳ್ಳಾರಿ | ಮಾನವ ಬಂದುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ಆಚರಣೆ
ಬಳ್ಳಾರಿ : ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಮತ್ತು ನಗರದ ಮಿಲ್ಲರ್ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಶಾಲಾ ಮಕ್ಕಳಿಗೆ ಹಾಲು ಮತ್ತು ಸಿಹಿ ವಿತರಣೆ ಮಾಡುವ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಘಟನಾ ಸಂಚಾಲಕರಾದ ಗಂಗಾಧರ ಅವರು ಮಾತನಾಡಿ, ದೇಶದಲ್ಲಿ ಮೌಡ್ಯ ಮತ್ತು ಬಡತನ ತುಂಬಾ ತೀವ್ರತರದಲ್ಲಿ ಇದೆ. ನಾವುಗಳು ವೈಚಾರಿಕ ಎಂದು ಬದುಕಬೇಕು. ಮೌಢ್ಯವನ್ನು ಹೋಗಲಾಡಿಸಬೇಕು, ಬಸವಣ್ಣನವರು ಶರಣರು ನಮಗೆ ಅನೇಕ ವಿಷಯಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಸಂಗನಕಲ್ಲು ವಿಜಯಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ನಾಗೆರೆಡ್ಡಿ, ಮಾನವ ಬಂಧುತ್ವ ವೇದಿಕೆ ಪದಾಧಿಕಾರಿ ಜೋಗಿನ ವಿಜಯಕುಮಾರ್, ಲಿಂಗರಾಜ್, ಶಾಲಾ ಸಮಿತಿ ಅಧ್ಯಕ್ಷ ಲಕ್ಷ್ಮಿಪತಿ, ದಾಸಣ್ಣ ಸೊಸೈಟಿ ಅಧ್ಯಕ್ಷರು ಜೆಡಿಎಸ್, ಶಾಲೆಯ ಮುಖ್ಯ ಉಪಾಧ್ಯಾಯರು ಮತ್ತು ಶಿಕ್ಷಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.