×
Ad

ಬಳ್ಳಾರಿ | ಬಿಐಟಿಎಂ ವಿದ್ಯಾರ್ಥಿನಿ ಆಲಿಯಾ ಸಮಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

Update: 2025-09-21 22:38 IST

ಬಳ್ಳಾರಿ: ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಬಿಐಟಿಎಂ) ಸಂಸ್ಥೆಯ ಬಿಇ (ಇಇಇ) 2025ನೇ ಬ್ಯಾಚ್ ವಿದ್ಯಾರ್ಥಿನಿ ಆಲಿಯಾ ಸಮಾ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಯಮಾವಳಿಯ ಪ್ರಕಾರ ಬಿಇ ಪದವಿಗೆ 160 ಕ್ರೆಡಿಟ್‌ಗಳು ಅಗತ್ಯವಿದ್ದು, ಹೆಚ್ಚುವರಿಯಾಗಿ ಕನಿಷ್ಠ 18 ಕ್ರೆಡಿಟ್ ಗಳಿಸಬೇಕಾಗುತ್ತದೆ. ಆದರೆ ಆಲಿಯಾ ಸಮಾ ಒಟ್ಟು 73 ಹೆಚ್ಚುವರಿ ಕ್ರೆಡಿಟ್‌ಗಳನ್ನು ಸಂಪಾದಿಸಿ, ಹಿಂದಿನ 39 ಕ್ರೆಡಿಟ್‌ಗಳ ದಾಖಲೆಯನ್ನು ಮುರಿದಿದ್ದಾರೆ.

ಈ ಸಾಧನೆಗೆ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವತಿಯಿಂದ ಪ್ರಶಸ್ತಿ ಪತ್ರ ಮತ್ತು ಪದಕ ನೀಡಿ ಗೌರವಿಸಲಾಯಿತು. ತಮ್ಮ ಯಶಸ್ಸಿಗೆ ಪೋಷಕರಾದ ಶಕೀಬ್ ಮತ್ತು ಹಸ್ಮಖಾತುನ್, ಜೊತೆಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾರ್ಗದರ್ಶನವೇ ಕಾರಣ ಎಂದು ಆಲಿಯಾ ಸಮಾ ಹೇಳಿದ್ದಾರೆ.

ಆಲಿಯಾ ಸಮಾ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕ್ಲಾಸ್ ಟಾಪರ್ ಆಗಿದ್ದು, 18 ಕ್ಕೂ ಹೆಚ್ಚು ಹೆಚ್ಚುವರಿ ವಿಷಯಗಳನ್ನು ಅಧ್ಯಯನ ಮಾಡಿ ಒಟ್ಟು 233 ಕ್ರೆಡಿಟ್‌ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಅವರು ಜರ್ಮನಿಯ ಕಂಪನಿಯೊಂದರಲ್ಲಿ ವರ್ಷಕ್ಕೆ ಐದು ಲಕ್ಷ ರೂಪಾಯಿ ಪ್ಯಾಕೇಜ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಕಾಲೇಜ್ ಆಡಳಿತ ಮಂಡಳಿ ಆಲಿಯಾ ಸಮಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಿತು. ಈ ವೇಳೆ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶರಣರೆಡ್ಡಿ, ಪ್ರಾಂಶುಪಾಲ ಯ.ಬಸವರಾಜ್, ಪೋಷಕರು ಶಕೀಬ್ ಮತ್ತು ಹಸ್ಮಖಾತುನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News