ಬಳ್ಳಾರಿ | ಪರಿಸರ ಜಾಗೃತಿ ಅಭಿಯಾನ
Update: 2025-07-13 22:19 IST
ಬಳ್ಳಾರಿ: ಸಂಡೂರು ಸಮಾಜಮುಖಿ ಬಳಗ ಮತ್ತು ಸಂಡೂರು ವಿರಕ್ತ ಮಠ ಇವರ ಸಂಯುಕ್ತಾಶ್ರಯದಲ್ಲಿ ಜು.13ರಂದು ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಿಡಿ ಬಟ್ಟೆ ಚೀಲ ಹಿಡಿ ಎನ್ನುವ ಧ್ಯೇಯ ವಾಕ್ಯದಡಿ ಸಂಡೂರಿನಲ್ಲಿ ಗಿಡನೆಡುವುದು, ಪರಿಸರ ರ‍್ಯಾಲಿ ಮಾಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಅಝೀಝ್ ಮುಲ್ಲಾ, ಪ್ರಭು ಸ್ವಾಮಿಗಳು, ವಿರಕ್ತ ಮಠ ಸಂಡೂರು ಫಾದರ್ ಆಲ್ಬರ್ಟ್ ಡಿಸಿಲ್ವ, ಕ್ರಿಸ್ತ ಜ್ಯೋತಿ ಚರ್ಚ್ ಸಂಡೂರು ಲಾಲ್ ಹುಸೇನ್ ಕಂದಗಲ್, ಶಿಕ್ಷಕರು ಇಳಕಲ್, ಸಮದ್ ಕೊಟ್ಟುರು, ಸರ್ವ ಧರ್ಮದ ಮುಖಂಡರು ಭಾಗವಹಿಸಿದರು.