×
Ad

ಬಳ್ಳಾರಿ | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ ಆದ್ಯತೆ ನಮೂದಿಸಲು ಮೇ 17 ರವರೆಗೆ ಅವಕಾಶ

Update: 2025-05-14 19:33 IST

ಸಾಂದರ್ಭಿಕ ಚಿತ್ರ (Credit: Meta AI)

ಬಳ್ಳಾರಿ : ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ (ಆಂಗ್ಲ ಮಾಧ್ಯಮ) ಶಾಲೆ ಮತ್ತು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ(ಸಿಬಿಎಸ್‌ಸಿ) ಶಾಲೆಗಳಿಗೆ 2025-26 ನೇ ಸಾಲಿನಲ್ಲಿ 6ನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಈಗಾಗಲೇ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ತಾವು ಪ್ರವೇಶ ಪಡೆಯಲು ಇಚ್ಚಿಸುವ ಜಿಲ್ಲೆಯಲ್ಲಿನ ಶಾಲೆಗಳ ಆದ್ಯತೆಯನ್ನು ನಮೂದಿಸಲು ಮೇ 17 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ಶಾಲೆಗಳ ಶಾಲೆಗಳ ಆದ್ಯತೆ ನಮೂದಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣ http://dom.karnataka.gov.in ಗೆ ಭೇಟಿ ನೀಡಬೇಕು. ಈಗಾಗಲೇ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮತ್ತು ವಾಟ್ಸ್ಆಪ್ ಮೂಲಕ ಮಾಹಿತಿ ರವಾನಿಸಲಾಗಿದೆ.

ಹಾಗಾಗಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಪ್ಪದೇ ಶಾಲೆಗಳ ಆದ್ಯತೆ ನಮೂದಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News