×
Ad

ಬಳ್ಳಾರಿ | ತುಂಗಭದ್ರಾ ಜಲಾಶಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ : ಕೆ.ಎಂ.ಹೇಮಯ್ಯಸ್ವಾಮಿ

Update: 2025-12-22 21:54 IST

ಬಳ್ಳಾರಿ / ಕಂಪ್ಲಿ : ತುಂಗಭದ್ರಾ ಜಲಾಶಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಲಾಶಯ ಲಕ್ಷಾಂತರ ಜೀವಿಗಳಿಗೆ ಆಸರೆಯಾಗಲಿದೆ. ತುಂಗಭದ್ರಾ ಜಲಾಶಯದ ಉಳಿವಿಗೆ ನಡೆಯುತ್ತಿರುವ ‘ನಿರ್ಮಲ ತುಂಗಭದ್ರಾ’ ಅಭಿಯಾನಕ್ಕೆ ಕೈಜೋಡಿಸಿ, ಪಾಲ್ಗೊಳ್ಳಬೇಕು ಎಂದು ಅಭಿಯಾನದ ಸಂಚಾಲಕ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದ ಬಳಿ ಅಭಿಯಾನದ ಅಂಗವಾಗಿ ಎಲ್ಇಡಿ ಪರದೆ ಅಳವಡಿಸಿದ 'ನಿರ್ಮಲ ತುಂಗಭದ್ರಾ ಅಭಿಯಾನ’ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಚಾರ ವಾಹನದ ಮೂಲಕ ತುಂಗಭದ್ರ ನದಿಯ ವಾಸ್ತವ ಪರಿಸ್ಥಿತಿ ಕುರಿತು ಪ್ರದರ್ಶನ ಪಟ್ಟಣದ ವಿವಿಧಡೆ ಜರಗಿತು.

ಸಂಚಾಲಕರಾದ ಬಿ.ವಿ.ಗೌಡ ಶಿವಕುಮಾರ್ ಮಾಲಿಪಾಟೀಲ್, ಅಗಳಿ ಪಂಪಾಪತಿ, ಇಂದ್ರಜಿತ್ ಸಿಂಗ್, ಕೊಟ್ಟೂರ್ ರಮೇಶ, ಗಡದ ಪ್ರಸಾದ, ಆದೋನಿ ರಂಗಪ್ಪ, ಬಿ.ಎಮ್.ರುದ್ರಯ್ಯ, ಮುಕುಂದಿ ಮಮತಾ, ಕೃಷ್ಣ, ರಾಕೇಶ್, ಇಟಗಿ ವಿರೂಪಾಕ್ಷಿ, ಹಳ್ಳಿ ನಾಗಪ್ಪ, ಕಲ್ಗುಡಿ ನಾಗರತ್ನಮ್ಮ, ಟ.ಗಂಗಣ್ಣ, ಕಲ್ಗುಡಿ ರತ್ನ, ಉಮಾದೇವಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News