ಶಾಸಕ ಗಣೇಶ ನೇತೃತ್ವದಲ್ಲಿ 240 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಬಳ್ಳಾರಿ / ಕಂಪ್ಲಿ: ಮೂಲ ನಿವಾಸಿಗಳಿಗೆ ಹಕ್ಕುಪತ್ರ ಕೊಟ್ಟರೆ, ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ದೊರಕಲು ಸಾಧ್ಯ. ಆ ನಿಟ್ಟಿನಲ್ಲಿ ಇಲ್ಲಿನ 3/4ನೇ ವಾರ್ಡಿನ ಹರಿಜನ ಕಾಲೋನಿ(ಚಪ್ಪರದಹಳ್ಳಿ)ಯ ಹಲವು ದಶಕಗಳಿಂದ ನೆಲೆಸಿಕೊಂಡು ಬಂದ 240 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಇದರ ಸದುಪಯೋಗದೊಂದಿಗೆ ಸೌಲಭ್ಯ ಪಡೆಯಬೇಕು ಎಂದು ಶಾಸಕ ಜೆ.ಎನ್ ಗಣೇಶ ಹೇಳಿದರು.
ಪಟ್ಟಣದ 4ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯಲ್ಲಿ ವಸತಿ ಇಲಾಖೆಯ ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿಯ ಬಳ್ಳಾರಿ ಉಪವಿಭಾಗದಿಂದ ಶನಿವಾರ ಆಯೋಜಿಸಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ನಂತರ ಮಾತನಾಡಿ, ಹರಿಜನ ಕೇರಿ ಮತ್ತು ಚಪ್ಪರದಹಳ್ಳಿಯಲ್ಲಿ ಸುಮಾರು 50-60 ವರ್ಷಗಳಿಂದ ವಾಸಿಸುತ್ತಾ ಬಂದಿದ್ದು, ಇವರಿಗೆ ಅನೇಕ ವರ್ಷಗಳಿಂದ ನಿವೇಶ ಹಕ್ಕು ಪತ್ರ ಇಲ್ಲದ ಪರಿಣಾಮ ಸೌಲಭ್ಯಗಳಿಂದ ಮರೀಚಿಕೆಯಾಗಿದ್ದರು. ಆದರೆ, ಈಗ ಹಕ್ಕುಪತ್ರಗಳು ದೊರಕಿದ್ದು, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಕೆ.ಎಸ್.ಚಾಂದ್ ಬಾಷಾ, ನಾಗಮ್ಮ ಸತ್ಯಪ್ಪ, ಸಿ.ಆರ್.ಹನುಮಂತ, ಲೊಡ್ಡು ಹೊನ್ನೂರವಲಿ, ಕೊಳಗೇರಿ ಅಭಿವೃಧ್ದಿ ಮಂಡಳಿಯ ಅಧಿಕಾರಿ ತಿಮ್ಮಣ್ಣ, ಮುಖಂಡರಾದ ವಿ.ಸತ್ಯಪ್ಪ, ಎಂ.ಸುಧೀರ್, ಬಿ.ಸಿದ್ದಪ್ಪ, ಆಟೋ ರಾಘವೇಂದ್ರ, ಎಂ.ಸಿ.ಮಾಯಪ್ಪ, ಜಿ.ರಾಮಣ್ಣ, ನಾಗರಾಜ ಡೆಕೋರೇಶನ್, ಕನಕಪ್ಪ, ರಾಜು, ಯಲ್ಲಪ್ಪ, ಗಣೇಶ, ತಿಮ್ಮಪ್ಪ, ರಾಜಣ್ಣ, ಹೊನ್ನೂರಸಾಬ್ ಸೇರಿದಂತೆ ಅನೇಕರಿದ್ದರು.