×
Ad

ಕಂಪ್ಲಿ | ಬ್ರೈಟ್‌ವೇ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಹಳೇ ವಿದ್ಯಾರ್ಥಿಗಳಿಂದ ಧ್ವಜಾರೋಹಣ, 200 ಅಡಿ ತ್ರಿವರ್ಣ ಧ್ವಜ ಮೆರವಣಿಗೆ

Update: 2026-01-28 00:32 IST

ಕಂಪ್ಲಿ: ಪಟ್ಟಣದ ನಿವೇದಿತ ಶಿಕ್ಷಣ ಸಂಸ್ಥೆಯ ಬ್ರೈಟ್‌ವೇ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವೈಭವಯುತವಾಗಿ ಆಚರಿಸಲಾಯಿತು.

ಶಾಲೆಯ ಹಳೇ ವಿದ್ಯಾರ್ಥಿಗಳಾದ ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಿದುದು ಕಾರ್ಯಕ್ರಮದ ವಿಶೇಷವಾಗಿತ್ತು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಸುಮಾರು 200 ಅಡಿಗಳ ಬೃಹತ್ ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳು ಭುಜದ ಮೇಲೆ ಹೊತ್ತು ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಕುರುಗೋಡು ರಸ್ತೆಯಲ್ಲಿರುವ ಬ್ರೈಟ್‌ವೇ ಶಾಲೆಯವರೆಗೆ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು. ಮೆರವಣಿಗೆಯು ಸಾರ್ವಜನಿಕರಲ್ಲಿ ದೇಶಭಕ್ತಿ ಮೂಡಿಸಿತು.

ನಂತರ ನಡೆದ ಸಮಾರಂಭದಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಯು. ವಿನುತಾ ಶಿವರಾಜ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಯು. ಶಿವರಾಜ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಸಹ ಶಿಕ್ಷಕರಾದ ಮಹಮದ್ ಷರೀಫ್ ಕಲಂದರ್, ಭವ್ಯ, ಭಾಗ್ಯ, ರಜನಿ, ಪ್ರಿಯಾಂಕ್, ಭುವನೇಶ್ವರಿ, ಶ್ರೀಲತಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪಾಲಕರಾದ ಡಾ. ಮಂಜುನಾಥ್, ಅಶೋಕ ಹಂದ್ರಾಳ್, ವಿರೇಶ್, ನಾಗರಾಜ, ಎಸ್.ಎಸ್. ಅಜ್ಜಪ್ಪ, ವಿಶ್ವನಾಥ್, ಶ್ರೀಧರ ಶೆಟ್ಟಿ, ಅನುಪಮಾ, ಸ್ಮಿತಾ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಾದ ತನು, ಶ್ರಾವಣಿ, ಸಂಜನಾ, ಮನೋಜ, ಪ್ರೀತಮ್, ಸಾನಿಕ, ಜ್ಯೋತಿ, ಉಗಾದಿ ವೈಶಾಕ್, ಗುಂಡಿ ಧೀರಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News