×
Ad

ದೋಣಿಮಲೈ | ಮೇ 28ರಂದು ವಿದ್ಯುತ್ ವ್ಯತ್ಯಯ

Update: 2025-05-26 22:23 IST

ಬಳ್ಳಾರಿ : ಸಂಡೂರು ಜೆಸ್ಕಾಂ ವ್ಯಾಪ್ತಿಯ 110/33/11ಕೆ.ವಿ ದೋಣಿಮಲೈ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬ್ಯಾಟರಿ ಮೆಂಟೆನೆನ್ಸ್ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 28 ರಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸಂಡೂರು ಪಟ್ಟಣ ಸೇರಿದಂತೆ ಕೃಷ್ಣನಗರ ಗ್ರಾಮ ಪಂಚಾಯತ್‌, ಸುಶೀಲಾನಗರ ಗ್ರಾಮ ಪಂಚಾಯತ್‌, ಯಶವಂತನಗರ ಐಪಿಸೆಟ್ ಹಾಗೂ ಸಂಡೂರು ಪಟ್ಟಣದ ಸೀನ್ ಬಸಪ್ಪ ಕ್ಯಾಂಪ್, ನಂದಿಹಳ್ಳಿ, ಕಮತೂರು ನಾರಾಯಣಪುರ ಮತ್ತು ರಣಜಿತ್‌ಪುರ, ಭುಜಂಗನಗರ ಗ್ರಾಮ ಪಂಚಾಯತಿ, ದೇವಗಿರಿ ಗ್ರಾಮ ಪಂಚಾಯತ್‌, ನರಸಿಂಗಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ಪಂಚಾಯತಿಗಳಿಗೆ ಬರುವ ಗ್ರಾಮಗಳಲ್ಲಿ ಎನ್‌.ಜೆ.ವೈ ಮತ್ತು ಐ.ಪಿ.ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಸಂಡೂರು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News