ಸಂಕಷ್ಟಗಳನ್ನು ಮೆಟ್ಟಿನಿಲ್ಲಲು ಗುರುವಿನ ಆಶೀರ್ವಾದದ ಬಲ ಬೇಕು: ಪ್ರಾಚಾರ್ಯ ಘನಮಠಯ್ಯ ಹಿರೇಮಠ
ಬಳ್ಳಾರಿ / ಕಂಪ್ಲಿ: ಗುರುವಿನ ತತ್ವಾದರ್ಶ, ಉಪದೇಶಗಳನ್ನು ಪಾಲಿಸಿದರೆ ಹಸನಾದ ಬದುಕು ಸಾಗಿಸಲು ಸಾಧ್ಯ ಎಂದು ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ ಹೇಳಿದರು.
ಗೊಗ್ಗ ವಿಶಾಲಾಕ್ಷಮ್ಮ ಸ್ಮರಣಾರ್ಥ ಗುರುಮಠದಲ್ಲಿ ಓದ್ದೋ ಶಿವಾನಂದಾಶ್ರಮದಿಂದ ಆಯೋಜಿಸಿದ್ದ 264ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವ ಕುರಿತು ಉಪನ್ಯಾಸ ನೀಡಿ, ಬಾಳಿನಲ್ಲಿ ಬರುವ ಸಂಕಷ್ಟಗಳನ್ನು ಮೆಟ್ಟಿನಿಲ್ಲಲು ಗುರುವಿನ ಆಶೀರ್ವಾದದ ಬಲ ಮುಖ್ಯ ಎಂದರು.
ಕಲ್ಲುಡಿ ಬಸಂತಮ್ಮ ರಚಿಸಿದ ಶ್ರೀ ಶರಣವೀರ ಗೊಲ್ಲಾಳ ನಾಟಕವನ್ನು ಸಾಂಗತ್ರಯ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಾದ ಜಗದೀಶ್ ಪಾರ್ವತಿಯಾಗಿ, ಶಿವಕುಮಾರ್ ಪರಮೇಶ್ವರನಾಗಿ, ಹೇಳಿಕೆ ವೀರಯ್ಯ ಗೊಲ್ಲಾಳನಾಗಿ, ವಿಜಯಕುಮಾರ್ ಮಲ್ಲಪ್ಪನಾಗಿ, ವರುಣ್ಕಲಾವಿದರಾದ ಜಗದೀಶ್, ಶಿವಕುಮಾರ್, ವಿಜಯಕುಮಾರ್, ವರುಣ್ ಇತರರು ಅಭಿನಯಿಸಿದರು ಮಲ್ಲಮ್ಮಳಾಗಿ ಅಭಿನಯಿಸಿದರು.
ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಗೊಗ್ಗ ಶಾಂತಾ, ಚನ್ನಬಸವರಾಜ, ಗೊಗ್ಗ ಶೋಭಾ ಗುರುಸಿದ್ದಯ್ಯ, ಶಾರದಾ ಬಸವಲಿಂಗಯ್ಯ, ಮಂಜುಳಾ ಸತೀಶ್, ಎಸ್.ಡಿ.ಬಸವರಾಜ, ಕೆ.ಎಂ.ಚಂದ್ರಶೇಖರಸ್ವಾಮಿ, ಎಚ್.ಎಂ.ಜಗದೀಶ, ಮೆಟ್ರಿ ಯೋಗಾಚಾರ್, ಕಲ್ಲುಡಿ ನಾಗರತ್ನ ಇತರರಿದ್ದರು.