ವಿಜಯನಗರ: ಬಕ್ರೀದ್ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
Update: 2025-06-07 13:17 IST
ವಿಜಯನಗರ: ಬಕ್ರೀದ್ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಅಂಬೇಡ್ಕರ್ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಭಕ್ತಿ ಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಅಪ್ಪಿಕೊಂಡು ಬಕ್ರಿದ್ ಹಬ್ಬದ ಶುಭಾಶಯ ವಿನಿಯೋಗಿಸಿಕೊಂಡರು.
ಅಂಜುಮನ್ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ನಿಯಾಝಿ. ಡಾ. ಮೈನುದ್ದಿನ್ ದುರ್ವೇಶ್. ಕಟಕಿ ಸಾಧಿಕ್, ಫೈರೋಝ್ ಖಾನ್, ಗುಲಾಂ ರಸೂಲ್, ಸದ್ದಾಮ್ ಹುಸೇನ್, ಯೂಸುಫ್ ವಕೀಲ, ಮೋಷಿನ್ ಕೊತ್ವಾಲ್, ಖದೀರ್, ಮನ್ಸೂರ್ ಮತ್ತು ಮುಖಂಡರು ಮತ್ತು ಗುರುಗಳು ಭಾಗವಹಿಸಿದ್ದರು.