×
Ad

ಓಬಳಾಪುರಂ ಪ್ರಕರಣ : ಗಣಿಗಾರಿಕೆಯ ವ್ಯಾಪ್ತಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿಂದ ಸಮಿತಿ ನೇಮಕ

Update: 2025-09-19 23:24 IST

ಸುಪ್ರೀಂಕೋರ್ಟ್ | PC : PTI

ಬಳ್ಳಾರಿ : ಓಬಳಾಪುರಂ ಗಣಿಗಾರಿಕೆ ಪ್ರಕರಣದ ಗುತ್ತಿಗೆಯ ಗಡಿಗಳು ಮತ್ತು ಅಕ್ರಮ ಗಣಿಗಾರಿಕೆಯ ವ್ಯಾಪ್ತಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ.

ಈ ಸಮಿತಿಯ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ವಹಿಸಲಿದ್ದು, ಒಟ್ಟು 7 ಸದಸ್ಯರನ್ನೊಳಗೊಂಡಿದೆ. ಸಮಿತಿಯಲ್ಲಿ ಪರಿಸರ ಪ್ರಾಧಿಕಾರದ ಒಬ್ಬ ಸದಸ್ಯ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಇಬ್ಬರು ಸದಸ್ಯರು ಹಾಗೂ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವಾಲಯದ ಮೂವರು ಅಧಿಕಾರಿಗಳು ಸೇರಿದ್ದಾರೆ. ಸಮಿತಿಯು ತನ್ನ ವರದಿಯನ್ನು ಮೂರು ತಿಂಗಳ ಒಳಗಾಗಿ ಸಲ್ಲಿಸಬೇಕಾಗಿದೆ.

ಓಬಳಾಪುರಂ ಗಣಿಗಾರಿಕೆ ಪ್ರಕರಣವು ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಮತ್ತು ಅವರ ಸಹಚರರ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆಗೆ ಸಂಬಂಧಿಸಿದ್ದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News