×
Ad

ಮನುಷ್ಯ ಸಂಸ್ಕೃತನಾದರೆ ಮನುಕುಲದಲ್ಲಿ ಗೌರವ, ಪರಿಸರ ಇದ್ದರೆ ಆರೋಗ್ಯಕ್ಕೆ ಅನುಕೂಲ: ಸಿದ್ದರಾಮನಂದ ಮಹಾಸ್ವಾಮಿಗಳು

ಸಿರಿವಾರ ಗ್ರಾಮದಲ್ಲಿ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಯಾತ್ರೆಯ ಕಾರ್ಯಕ್ರಮ

Update: 2025-08-12 21:26 IST

ಬಳ್ಳಾರಿ: ತಾಲೂಕಿನ ಸಿರಿವಾರ ಗ್ರಾಮದಲ್ಲಿ ಹಾಲುಮತ ಸಮುದಾಯದ ಮುಖಂಡರು ಹಾಗೂ ಬಂದುಗಳ ವತಿಯಿಂದ ಬಳ್ಳಾರಿ ಜಿಲ್ಲೆಯ ಹಾಲುಮತ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಯಾತ್ರೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಗುಲ್ಬರ್ಗ ವಿಭಾಗದ ತಿಂತಿಣಿಬ್ರಿಡ್ಜ್ ನ ಕನಕ ಗುರಪೀಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧರಾಮನಂದ ಮಹಾಸ್ವಾಮಿಜಿ ಕಾರ್ಯಕ್ರಮ ಉದ್ಘಾಟಸಿದರು.

ಈ ಸಂದರ್ಭದಲ್ಲಿ  ಶ್ರೀ ಲಿಂಗದೇವರು ಸ್ವಾಮಿ, ಶ್ರೀ ಗೋವರ್ಧನಂದ ಸ್ವಾಮಿ, ಶರಣ ಬಸಯ್ಯ ಸ್ವಾಮಿ, ಬಳ್ಳಾರಿ ಜಿಲ್ಲಾ ಕುರುಬ ಸಂಘ ಅಧ್ಯಕ್ಷರಾದ ಪಿ.ಎಲ್.ಗಾದಿಲಿಂಗನ ಗೌಡ, ಸಂಘಟನಾ ಕಾರ್ಯದರ್ಶಿ ಕೊಳಗಲ್ ಅಂಜಿನಿ, ಹಾಲುಮತ ಸಮಾಜದ ಹಿರಿಯ ಮುಖಂಡರಾದ ರಾಮಲಿಂಗಪ್ಪ, ಕೆರೆಕೂಡಪ್ಪ, ಪಾಲಿಕೆ ಸದಸ್ಯ ಈರಮ್ಮ ಸುರೇಂದ್ರ, ಜನತಾ ಬಜಾರ್ ಅಧ್ಯಕ್ಷರಾದ ವೇಮಣ್ಣ, ಬಾಣಾಪುರ ಪಂಪನಗೌಡ, ಭಟ್ಟಿ ಇರಿ ಸ್ವಾಮಿ, ಜಾನೆಕುಂಟೆ ದೊಡ್ಡ ಬಸವ, ಶಿವುಕುಮಾರ, ಅಸುಂಡಿ ಪರಮೇಶಿ, ಎಸ್ ಜೆ ಕೋಟೆ ದೇವರಾಜ್, ರವಿ ಕಾರಮೆಂಚಿ, ಬೆಳ್ಳಿ ಕಟ್ಟಪ್ಪ, ಮಾರೆಣ್ಣ, ಅಹಿಂದ ಜಿಲ್ಲಾಧ್ಯಕ್ಷ ಜೋಗಿನ ಚಂದ್ರಪ್ಪ, ಸಿರಿವಾರ ಹಾಲುಮತ ಸಮುದಾದ ಮುಖಂಡರಾದ ಪಿ.ಶೇಖಲಿಂಗ, ಪಂಪಣ್ಣ, ಜಿನಗಪ್ಪ, ಚಂದ್ರಪ್ಪ, ಕೋಳಿ ಶಂಕ್ರಪ್ಪ, ಕೋಳಿ ಚನ್ನಬಸಪ್ಪ, ಓಂಕಾರಿ, ಮರಿಲಿಂಗ, ಕೃಷ್ಣಪ್ಪ, ಹೆಚ್. ಶೇಖಲಿಂಗ, ಡಿ.ಗಾದಿಲಿಂಗಪ್ಪ, ಭೀಮ ಲಿಂಗ, ಡಿ.ಶಿವಣ್ಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಾಲುಮತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News