ಸಂಡೂರು ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿ ಸುರೇಶ್ ಕೆ.ವಿ ಆಯ್ಕೆ

Update: 2026-07-21 22:01 IST

ಸಂಡೂರು/ಬಳ್ಳಾರಿ: ತಾಲೂಕಿನ ಕನಕ ಭವನದಲ್ಲಿ ಭಾನುವಾರ ನಡೆದ ಸಂಡೂರು ತಾಲೂಕು ಕುರುಬ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸುರೇಶ್ ಕೆ.ವಿ ಅವರು ನೂತನ ತಾಲೂಕು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಸಭೆಯಲ್ಲಿ ಸಂಘದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸತ್ಯಪ್ಪ ಕೆ., ಕಾರ್ಯಾಧ್ಯಕ್ಷರಾಗಿ ಗುರುಪಾದಪ್ಪ ಕೆ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕೆ. ವಡ್ಡು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಕೆ. (ಕೃಷ್ಣನಗರ), ಶಂಕ್ರಪ್ಪ (ಅಂತಾಪುರ), ಅಂಬಣ್ಣ (ಮಾದಾಪುರ) ಹಾಗೂ ಎಲ್. ಸುಲ್ತಾನಪ್ಪ (ಸೋವೇನಹಳ್ಳಿ) ಆಯ್ಕೆಯಾಗಿದ್ದು, ಖಜಾಂಚಿಯಾಗಿ ರವಿ ವಿ. ನೇಮಕಗೊಂಡರು.

ಸಂಘಟನಾ ಕಾರ್ಯದರ್ಶಿಗಳಾಗಿ ಮಾರುತಿ (ಕುರೆಕುಪ್ಪ), ತಿಪ್ಪೇಸ್ವಾಮಿ (ವಿಠಲಾಪುರ) ಹಾಗೂ ಕುಮಾರಸ್ವಾಮಿ (ಕೊಂಡಾಪುರ) ಆಯ್ಕೆಯಾದರೆ, ಸಹ ಕಾರ್ಯದರ್ಶಿಗಳಾಗಿ ಸುರೇಶ್ (ಸುಲ್ತಾನಪುರ), ಚಂದ್ರಪ್ಪ (ಬಸಾಪುರ) ಹಾಗೂ ರೇಣುಕಪ್ಪ (ಬನ್ನಿಹಟ್ಟಿ) ನೇಮಕಗೊಂಡರು.

ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಹಿರಿಯರು, ಸಮಾಜದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ಸುರೇಶ್ ಕೆ.ವಿ. ಮಾತನಾಡಿ, ಸಂಘದ ಸದಸ್ಯರ ಸಹಕಾರದೊಂದಿಗೆ ಸಮಾಜದ ಹಿತಾಸಕ್ತಿಗೆ ಆದ್ಯತೆ ನೀಡಿ, ಯುವಜನರನ್ನು ಸಂಘಟಿಸಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News