×
Ad

ಬಳ್ಳಾರಿ | ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Update: 2025-07-20 19:23 IST

ಬಳ್ಳಾರಿ : ನಗರದ ಕೌಲ್ ಬಝಾರ್ ಭಾಗದ 25ನೇ ವಾರ್ಡಿನ ರೇಡಿಯೋ ಪಾರ್ಕ್ ಹತ್ತಿರ ಬರುವ ಕೌಲ್ ಬಜಾರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಉಪಮೇಯರ್ ಡಿ.ಸುಕುಮ್ ರಿಯಾಝ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಶಿಬಿರದಲ್ಲಿ 246 ರಕ್ತ ದಾನಿಗಳು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ತಮ್ಮ ಜೀವ ರಕ್ಷಣೆಗಾಗಿ ಉಚಿತವಾಗಿ ಉಪ ಮೇಯರ್ ಹಾಗೂ ಆರೋಗ್ಯ ಅಧಿಕಾರಿಗಳು ಹೆಲ್ಮೆಟ್ ಗಳನ್ನ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ವೈ.ಎಲ್.ರಮೇಶ್ ಬಾಬು, ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ, ಡಾ.ಮುಜಾ ಮಿಲ್ಲ ಡಾ.ಪಿರ್ದೋಸ್, ಡಾ.ಮಾರಿಯಂಬಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News