ಸಾಂದರ್ಭಿಕ ಚಿತ್ರ

ಬೆಂಗಳೂರು : ಹಿರಿಯ ಸಾಹಿತಿ ಪ್ರೊ.ನಟರಾಜ್ ಹುಳಿಯಾರ್ ಸೇರಿ ನಾಲ್ವರು ಎಸ್.ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಎಸ್.ಬಂಗಾರಪ್ಪ ಫೌಂಡೇಷನ್ ವತಿಯಿಂದ ನೀಡುವ ‘ಬಂಗಾರ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಪ್ರೊ.ನಟರಾಜ್ ಹುಳಿಯಾರ್ ಅವರು ‘ಸಾಹಿತ್ಯ ಬಂಗಾರ’, ಪ್ರೊ.ಜಿ.ಎಸ್.ಜಯದೇವ ಅವರು ‘ಸೇವಾ ಬಂಗಾರ’, ಶೇಖ ಮಾಸ್ತರ್ ಅವರು ‘ರಂಗ ಬಂಗಾರ’, ಬಿ.ಸಿ.ರಮೇಶ್ ಅವರು ಕ್ರೀಡಾ ‘ಬಂಗಾರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ 1ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ತಾಮ್ರ ಪತ್ರವನ್ನು ಒಳಗೊಂಡಿದೆ. ಅ.26ರಂದು ಶಿವಮೊಗ್ಗ ಜಿಲ್ಲೆಯ ಸೊರಬದ ಬಂಗಾರ ಧಾಮದಲ್ಲಿ ನಡೆಯುವ ಎಸ್.ಬಂಗಾರಪ್ಪ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಸಚಿವ ಮಧು ಬಂಗಾರಪ್ಪ, ವೇಣುಗೋಪಾಲ್ ನಾಯಕ್, ಡಾ.ಕೆ.ವಿ.ನಾಗರಾಜಮೂರ್ತಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor