ಬೆಂಗಳೂರು : ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದ್ದು, ಇವರೊಂದಿಗೆ ಸೇರಿ ಮತಗಳ್ಳತನಕ್ಕೆ ಪಾಲುದಾರರಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ ಆಯುಕ್ತರನ್ನು ಬಂಧಿಸಬೇಕು ಹಾಗೂ ಅಕ್ರಮವಾಗಿ ನಡೆದ ಚುನಾವಣೆಗಳನ್ನು ರದ್ದು ಮಾಡಬೇಕು. ಸಂವಿಧಾನದ ಮೂಲಕ ಈ ದೇಶದ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ ಅಧಿಕಾರ ನೀಡಲಾಗಿತ್ತು. ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ.ಇದಕ್ಕೆ ಸೂಕ್ತ ಸಾಕ್ಷಿಗಳೂ ಕಾಣುತ್ತಿವೆ ಎಂದರು.

ಜ್ಞಾನೇಶ್ ಕುಮಾರ್ ಅವರು ಮುಖ್ಯ ಆಯುಕ್ತರಲ್ಲ. ಅವರು ಆಯ್ಕೆ ಆಯುಕ್ತರು. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು. ಅಧಿಕಾರದ ವ್ಯಾಮೋಹ ಜಾಸ್ತಿ ದಿನ ಇರುವುದಿಲ್ಲ. ಹುಟ್ಟಿದ ಸೂರ್ಯ ಮುಳುಗಲೇಬೇಕು. ಈಗ ನಡೆದಿರುವ ಎಸ್ ಐಆರ್ ರದ್ದುಗೊಳ್ಳಬೇಕು. ಹೊಸದಾಗಿ ಮರುಪರಿಶೀಲನೆ ನಡೆಯಬೇಕು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಬೆಯಂತಿರುವವರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡಿದರು. ಆದರೆ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ತೀರ್ಪಿನ ವಿರುದ್ಧ ಸಿಡಿದೆದ್ದಿದ್ದಾರೆ. ಇದು ನಿಮ್ಮ ತೀರ್ಪಿನ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿರ್ದೇಶನ ಎಂದು ಕುಹಕವಾಡಿದರು.

ಬೆಂಗಳೂರು ಕೇಂದ್ರ ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು 31 ಸಾವಿರ ಮತಗಳ ಅಂತರದಿಂದ ಚುನಾವಣಾ ಆಯೋಗದ ಪ್ರಕಾರ ಸೋತಿದ್ದರು. ಈಗ ಎಸ್‍ಐಆರ್ ನಿಂದ 12 ಲಕ್ಷ ಮತಗಳು ಕಡಿಮೆಯಾಗಿವೆ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ದುಷ್ಕೃತ್ಯದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಹೋಗುತ್ತಿದೆ. ಆದ ಕಾರಣ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ. ಎಸ್‌ ಐಆರ್ ಸೇರಿದಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor