ಬೆಂಗಳೂರು : ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೂ ಮುಕ್ತಿ ನೀಡಲು ಅನೇಕ ರಾಜ್ಯಗಳೊಂದಿಗೆ ವಿಚಾರ ವಿನಿಮಯ ಮಾಡಿ ಕೇರಳ ಹಾಗೂ ಗೋವಾ ಮಾದರಿಯ ನೀತಿಗಳಿಗೆ ನೀಡಿದಂತೆ ಶಕ್ತಿ ನೀಡಲು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳುನಾಡಿನಿಂದ ಹೊರಗಿನ ದೇಶಗಳಿಗೆ ತೆರಳಿರುವವರನ್ನು ತವರಿಗೆ ಕರೆಸಿ ತುಳುನಾಡಿನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮನವಿ ಮಾಡಲಾಗಿದೆ. ದಸರಾದಲ್ಲಿ ತುಳುನಾಡು ಬಯಲುಕುಪ್ಪೆ, ರಕ್ಷಣಾ ಇಲಾಖೆಗಳ ಸ್ತಬ್ಧಚಿತ್ರ ರಚಿಸಲು, ತಯಾರಿಸಲು ಸೂಚಿಸಲಾಗಿದೆ.

ಕಾವೇರಿ ಆರತಿ ಕಾರ್ಯಕ್ರಮ ಕೂಡ ನಡೆಯಲಿದ್ದು, ಮೈಸೂರು ಸೇರಿದಂತೆ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅನೇಕ ವಿಶ್ವ ಪಾರಂಪರಿಕ ತಾಣಗಳು ಇವೆ. ಚರ್ಚೆಗಳನ್ನು ಸರಕಾರ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಪ್ರವಾಸೋದ್ಯಮದಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಹೂಡಿಕೆದಾರರಿಗೆ ಶಕ್ತಿ ತುಂಬಬೇಕಿದೆ.

ಪರಂಪರೆ, ಇತಿಹಾಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮ ರಾಜ್ಯದ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ನಮ್ಮ ಊರು, ನಮ್ಮ ಊಟ, ಸಂಸ್ಕೃತಿ, ಇತಿಹಾಸ ಎಲ್ಲಕ್ಕೂ ಮಹತ್ವ ನೀಡಬೇಕು ಎಂದು‌‌ ನುಡಿದರು.

"ಮಂಗಳೂರು ಐ"- ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ದುಬೈ ಶೈಲಿಯ ಬೃಹತ್ ಆಕಾಶಗೋಪುರ ಮತ್ತು ಪ್ರವಾಸಿ ಆಕರ್ಷಣೆಯ ಯೋಜನೆಯಾಗಿದೆ. ಇವುಗಳ ಅನುಷ್ಠಾನ ಕಷ್ಟಕರ ಹಾಗೂ ಸಮಯ ಹಿಡಿಯಲಿದೆ. ಮಂಗಳೂರಿನಲ್ಲಿ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನಕ್ಕೆ ತೀರ್ಮಾನಿಸಬೇಕಿದೆ" ಎಂದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಮ್ ಪ್ರಸಾತ್ ಮನೋಹರ್, ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಕೆ. ಶ್ಯಾಮ್ ರಾಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor