×
Ad

ಏರೋನಿಕ್ಸ್ ಕಂಪೆನಿಯ ಎಂ.ಡಿ., ಸಿಇಒ ಹತ್ಯೆ ಪ್ರಕರಣ: ಜಿ-ನೆಟ್ ಕಂಪೆನಿ ಮಾಲಕನ ಸೆರೆ

Update: 2023-07-13 12:32 IST

ವಿನುಕುಮಾರ್ ಹಾಗೂ ಫಣೀಂದ್ರ   

ಬೆಂಗಳೂರು, ಜು.13: ಏರೋನಿಕ್ಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಫಾರಿ ನೀಡಿದ್ದ ಆರೋಪದಲ್ಲಿ ಜಿ-ನೆಟ್ ಕಂಪೆನಿ ಮಾಲಕ ಅರುಣ್ಕುಮಾರ್ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜು.11ರಂದು ನಡೆದಿದ್ದ ಕೊಲೆ ಸಂಬಂಧಿಸಿ ಈಗಾಗಲೇ ಮೂವರನ್ನು ಬಂಧಿಸಿದ್ದ ಪೊಲೀಸರು, ಅರುಣ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.

'ಹಣಕಾಸಿನ ವ್ಯವಹಾರದ ವೈಷಮ್ಯದಿಂದ ಕೊಲೆ ಮಾಡಲು ಅರುಣ್ ಸುಪಾರಿ ನೀಡಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಅಪರಾಧ ಕೃತ್ಯಕ್ಕೆ ಸಂಚು ಹಾಗೂ ಕೊಲೆ ಆರೋಪದಡಿ ಅರುಣ್ನನ್ನು ಬಂಧಿಸಲಾಗಿದೆ' ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬಿ.ಎಂ.ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

'ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಎಲ್ಲರನ್ನೂ ಕಸ್ಟಡಿಗೆ ಪಡೆಯಲಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News