ಕಾಂಗ್ರೆಸ್ ಸೋಲಿಗೆ ‘ಕಾಗದ ಕಳ್ಳತನ’ ನೆಪವೇ? : ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು : ಆತ್ಮೀಯ ರಾಹುಲ್ ಗಾಂಧಿ ಅವರೇ, ದೋಷ ಹೊರಿಸಲು ಇಲ್ಲಿ ಯಾವುದೇ ಇವಿಎಂ ಇಲ್ಲ, ರಾಜ್ಯದ ಆಡಳಿತ ಯಂತ್ರ ನಿಮ್ಮ ಕೈಯಲ್ಲಿದೆ ಮತ್ತು ಚುನಾವಣೆ ನಡೆದದ್ದು ಕಾಗದದ ಮತಪತ್ರಗಳ ಮೂಲಕ. ಹಾಗಿದ್ದರೂ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ನಿಮ್ಮ ಸರಕಾರದ ಮೂಗಿನ ಮುಂದೆಯೇ, ಸುಶಿಕ್ಷಿತ ಶಿಕ್ಷಕರು ಕಾಗದದ ಮತಪತ್ರಗಳ ಮೂಲಕ ಮತ ಚಲಾಯಿಸಿರುವಾಗ, ಇಂದಿನ ನಿಮ್ಮ ನೆಪವೇನು? ‘ಕಾಗದ ಕಳ್ಳತನ’ ಎಂದೇ? ಎಂದು ವ್ಯಂಗ್ಯವಾಡಿದ್ದಾರೆ.