ಬೆಂಗಳೂರು : ರಾಜ್ಯ ಸರಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ತಬಾರಕ್ ಫಾತಿಮಾ, ಗೀತಾ ಕುಲಕರ್ಣಿ ಸೇರಿ 19 ಡಿವೈಎಸ್‌ಪಿ ಹಾಗೂ ಆಯಿಷಾ ಎಸ್., ಗುರುಪ್ರಸಾದ್ ಜಿ. ಸೇರಿ 82 ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಡಿವೈಎಸ್‌ಪಿ ವರ್ಗಾವಣೆ: ಸಿಐಡಿಯಲ್ಲಿರುವ ಸ್ವಾಮಿ ಜಿ.ಟಿ ಅವರನ್ನು ಶಿಗ್ಗಾಂವಿ ಉಪ ವಿಭಾಗಕ್ಕೆ, ಶಿಗ್ಗಾಂವಿ ಉಪ ವಿಭಾಗದಲ್ಲಿರುವ ಗುರುಶಾಂತಪ್ಪ ಕೆ.ವಿ ಅವರನ್ನು ಡಿಸಿಆರ್‌ಇಗೆ, ಆಂತರಿಕ ಭದ್ರತಾ ವಿಭಾಗದ ಶ್ರೀಧರ್ ಕೆ. ಪೂಜಾರ್ ಅವರನ್ನು ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗಕ್ಕೆ, ಲೋಕಾಯುಕ್ತದಲ್ಲಿರುವ ಅನಿಲ್ ಕುಮಾರ್ ಎಚ್.ಆರ್. ಅವರನ್ನು ಶಿಕಾರಿಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಶಿಕಾರಿಪುರ ಉಪ ವಿಭಾಗದ ಕೇಶವ ಕೆ.ಇ. ಅವರನ್ನು ಡಿಸಿಆರ್‌ಇಗೆ, ಡಿಸಿಆರ್‌ಇನಲ್ಲಿರುವ ದತ್ತಾತ್ರೇಯ ಅವರನ್ನು ಬಳ್ಳಾರಿ ವಲಯದ ಐಜಿಪಿ ಕಚೇರಿಗೆ, ಆಂತರಿಕ ಭದ್ರತಾ ವಿಭಾಗದ ಪುಷ್ಪಲತಾ.ಎನ್ ಅವರನ್ನು ಸಿಐಡಿಗೆ, ಡಿಸಿಆರ್‌ಇನಲ್ಲಿರುವ ಪ್ರಶಾಂತ್ ಜಿ.ಮುನ್ನೋಳಿ ಅವರನ್ನು ಸಿಐಡಿಗೆ, ಡಿಸಿಆರ್‌ಇನಲ್ಲಿರುವ ನಾಗರಾಜ ಎಂ.ಎನ್. ಅವರನ್ನು ಲೋಕಾಯುಕ್ತಕ್ಕೆ, ಡಿಸಿಆರ್‌ಇನಲ್ಲಿರುವ ನರಸಿಂಹಮೂರ್ತಿ ಪಿ. ಅವರನ್ನು ಕಮಾಂಡ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿದೆ.

ಡಿಸಿಆರ್‌ಇನಲ್ಲಿರುವ ಜಾವೇದ್ ಇನಾಂದಾರ್ ಅವರನ್ನು ಯಾದಗಿರಿ ಜಿಲ್ಲೆಯ ಸಿಸಿಪಿಎಸ್‌ಗೆ, ಲೋಕಾಯುಕ್ತದಲ್ಲಿರುವ ಸುನೀಲ್ ಕುಮಾರ್ ಬಿ. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಿಸಿಪಿಎಸ್‌ಗೆ, ನರಗುಂದ ಉಪ ವಿಭಾಗದ ಪ್ರಭುಗೌಡ ಕಿರೇದಳ್ಳಿ ಅವರನ್ನು ಹುಬ್ಬಳ್ಳಿ-ಧಾರವಾಡ ನಗರದ ಸಿಸಿಪಿಎಸ್‌ಗೆ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ನಗರದ ಸಿಸಿಆರ್‌ಬಿಯಲ್ಲಿರುವ ಗೀತಾ ಕುಲಕರ್ಣಿ ಅವರನ್ನು ರಾಜ್ಯ ಗುಪ್ತವಾರ್ತೆಗೆ, ಬೆಂಗಳೂರು ನಗರದ ವಿಐಪಿ ಭದ್ರತಾ ವಿಭಾಗದ ಶ್ರೀನಿವಾಸ ರೆಡ್ಡಿ ಎನ್.ಟಿ. ಅವರನ್ನು ರಾಜ್ಯ ಗುಪ್ತವಾರ್ತೆಗೆ, ರಾಜ್ಯ ಗುಪ್ತವಾರ್ತೆಯಲ್ಲಿರುವ ಉಮಾದೇವಿ ಆರ್. ಅವರನ್ನು ಗಿರಿನಗರ ಉಪ ವಿಭಾಗಕ್ಕೆ, ಬಿಎಂಆರ್‌ಡಿಎ ಟಾಸ್ಕ್‌ಫೋರ್ಸ್‌ನ ರವಿಕುಮಾರ್ ಅವರನ್ನು ಗಾಂಧಿನಗರದ ಸಂಚಾರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ಪೂರ್ವ ಸಂಚಾರ ಉಪ ವಿಭಾಗದ ತಬಾರಕ್ ಫಾತಿಮಾ ಅವರನ್ನು ಇಂದಿರಾನಗರದ ಸಂಚಾರ ಉಪ ವಿಭಾಗದ ಎಸಿಪಿ ಕಚೇರಿಗೆ, ಬೆಂಗಳೂರು ನಗರದ ಎಟಿಸಿ ಸೆಲ್‌ನ ಸುಶೀಲ ಆರ್. ಅವರನ್ನು ಸಂಚಾರ ಪೂರ್ವ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದರೊಂದಿಗೆ 82 ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor