ಎಐಸಿಸಿ ಕರ್ನಾಟಕ ರಾಜ್ಯ ಕ್ಷಿಪ್ರ ಪ್ರತಿಕ್ರಿಯೆ ಪಡೆಯ ಸದಸ್ಯರಾಗಿ ಆಸೀಫ್ ಅಲಿ ಎಸ್. ನೇಮಕ
ನವದೆಹಲಿ : ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯಕ್ಕಾಗಿ ಕ್ಷಿಪ್ರ ಪ್ರತಿಕ್ರಿಯೆ ಪಡೆಯ ಹಿರಿಯ ಸದಸ್ಯರಾಗಿ ಎಸ್. ಆಸೀಫ್ ಅಲಿ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಇಲಾಖೆಯ ಅಧ್ಯಕ್ಷ ಅಭಿಷೇಕ್ ಸಿಂಘ್ವಿ ಅವರು, ಕರ್ನಾಟಕದಲ್ಲಿ ಅಗತ್ಯವಿರುವ ಸಂದರ್ಭದಲ್ಲಿ ಕಾನೂನು ಬೆಂಬಲ ಒದಗಿಸಿ, ರಾಜ್ಯ-ನಿರ್ದಿಷ್ಟ ಅವಶ್ಯಕತೆಗಳನ್ನು ಪರಿಹರಿಸಬೇಕೆಂದು ಸೂಚಿಸಿದ್ದಾರೆ.
ಎಸ್. ಆಸೀಪ್ ಅಲಿ ಅವರು ರಾಷ್ಟ್ರೀಯ ಸಂಯೋಜಕರಾದ ಒಮರ್ ಹೊಡಾ ಹಾಗೂ ಕರ್ನಾಟಕ ರಾಜ್ಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ಇಲಾಖೆಯ ಅಧ್ಯಕ್ಷರಾದ ಸಿ.ಎಂ. ಧನಂಜಯ ಅವರಿಗೆ ವರದಿ ಮಾಡಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
“ನೀವು ನಿಮ್ಮ ಪಾತ್ರವನ್ನು ಅತ್ಯಂತ ವೃತ್ತಿಪರತೆ ಮತ್ತು ಸಮರ್ಪಣೆಯೊಂದಿಗೆ ನಿರ್ವಹಿಸುವಿರಿ ಎಂಬ ವಿಶ್ವಾಸವಿದೆ” ಎಂದು ಆದೇಶ ಪತ್ರದಲ್ಲಿ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.