ಔರಾದ್ | ವೀರೇಂದ್ರ ಸಿಂಪಿಯವರು ಇಂಗ್ಲಿಷ್ ಸಾಹಿತ್ಯ ಕಲಿತರೂ ಅವರಿಗೆ ಕನ್ನಡ ಪಂಚ ಪ್ರಾಣ : ಶಿವಕುಮಾರ್ ನಾಗವಾರ್
ಔರಾದ್: ಪಿಯುಸಿ ಪಠ್ಯದಲ್ಲಿ ವೀರೇಂದ್ರ ಸಿಂಪಿಯವರ ಬಗ್ಗೆ ಪಾಠವಿದೆ. ಅವರು ಬದುಕಿನುದ್ದಕ್ಕೂ ಅನೇಕ ಕಷ್ಟ ನೋವುಗಳನ್ನು ಕಂಡವರು. ಸಿಂಪಿಯವರು ಉತ್ತಮ ಸಾಹಿತ್ಯ, ಇಂಗ್ಲಿಷ್ ಕಲಿತರೂ ಕನ್ನಡ ಅವರಿಗೆ ಪಂಚ ಪ್ರಾಣ ಎಂದು ಹಿರಿಯ ಕಥೆಗಾರ ಶಿವಕುಮಾರ್ ನಾಗವಾರ್ ಅವರು ಹೇಳಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೀರೇಂದ್ರ ಸಿಂಪಿ ಅವರ ಬದುಕು ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯವು ಅವರವರ ಆಸಕ್ತಿ, ಅಭಿರುಚಿಯ ಮೇಲೆ ಹುಟ್ಟಿಕೊಳ್ಳುತ್ತದೆ. ಒಂದು ಸಂಸ್ಥೆ ನಡೆಸಬೇಕಾದರೆ ಅವರಿಗೆ ಸಾಮಾಜಿಕ ಕಳಕಳಿ ಇರಬೇಕು. ಸಾಹಿತ್ಯದ ಪರಿಜ್ಞಾನಬೇಕು. ಸಮಾಜದ ಬೆಳೆವಣಿಗೆಯಲ್ಲಿ ಆಸಕ್ತಿ ಹೊಂದಬೇಕು. ಸಾಂಸ್ಕೃತಿಕ ಸಮಾರಂಭದಲ್ಲಿ ಸಾಹಿತಿ, ಲೇಖಕರ ಬಗ್ಗೆ ಚರ್ಚಿಸಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ಪುಸ್ತಕಗಳು ಓದಬೇಕು ಎಂದು ಸಲಹೆ ನೀಡಿದರು.
ಡಾ. ಜಯದೇವಿ ತೇಲಿ ಅವರು ವಿಶೇಷ ಉಪನ್ಯಾಸ ನೀಡಿ, ವೀರೇಂದ್ರ ಸಿಂಪಿ ಅವರು ಬರೆದ ಕಥೆ, ಕವನ, ಕಾದಂಬರಿ, ಪ್ರವಾಸ ಕಥನ, ಮುಂತಾದ ಪ್ರಕಾರಗಳನ್ನು ಬರೆದಿದ್ದಾರೆ. ಸಮಸ್ಯೆಗಳನ್ನು ಎದುರಿಸುವ ಶಕ್ತಿ ಎಲ್ಲರಲ್ಲೂ ಬರಬೇಕು. ಬೀದರ್ ಜಿಲ್ಲೆಯ ಉತ್ತಮ ಸಾಹಿತಿಗಳ ಸಾಲಿನಲ್ಲಿ ಸಿಂಪಿ ಒಬ್ಬರಾಗಿದ್ದು, ಅವರು ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಕಲಿತವರಾಗಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಡಾ. ಮಕ್ತುಂಬಿ ಅವರು ಅಧ್ಯಕ್ಷತೆಯ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ, ಶಬನಮ್, ಗೌರಮ್ಮ ಹಾಗೂ ಪ್ರದೀಪ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.