×
Ad

ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಔರಾದ್ ತಾಲೂಕು ಪದಾಧಿಕಾರಿಗಳ ನೇಮಕ

Update: 2025-12-19 18:46 IST

ಬೀದರ್ : ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಘಟನೆಯ ಔರಾದ್ ತಾಲೂಕು ಘಟಕವನ್ನು ರಚಿಸಿ, ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಔರಾದ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ ಅವರು ನೇತೃತ್ವ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಔರಾದ ತಾಲೂಕು ಘಟಕದ ಪದಾಧಿಕಾರಿಗಳು :

ಸಂಪತ್‌ಕುಮಾರ್ ಸಕ್ಪಾಲ್ (ಗೌರವಾಧ್ಯಕ್ಷ), ಪ್ರವೀಣ್ ಕಾರಂಜೆ (ತಾಲೂಕು ಅಧ್ಯಕ್ಷ), ಸಂತೋಷ್ ಸೂರ್ಯವಂಶಿ (ಉಪಾಧ್ಯಕ್ಷ), ದಿನೇಶ್ ಶಿಂಧೆ(ಪ್ರಧಾನ ಕಾರ್ಯದರ್ಶಿ), ಸುಂದರ್ ಮೇತ್ರೆ(ಖಜಾಂಚಿ), ಸಿದ್ಧಾರ್ಥ ಭೋಸ್ಲೆ (ಕಾರ್ಯದರ್ಶಿ), ಗಂಗಾರಾಮ್ (ಸಹ ಕಾರ್ಯದರ್ಶಿ), ಪ್ರೇಮ್ ಗೋಡಬೋಲೆ (ಜಂಟಿ ಕಾರ್ಯದರ್ಶಿ) ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಅಮೀತ್ ಶಿಂಧೆ, ಸತ್ಯಪಾಲ್ ವಾಘಮಾರೆ, ಗಂಗಾಧರ್ ಸೂರ್ಯವಂಶಿ, ಸತೀಶ್ ಸೂರ್ಯವಂಶಿ, ರಾಹುಲ್ ಸೋನಕಾಂಬಳೆ, ಕಾಂತೇಶ್ ಭಾಲ್ಕೆ, ರಾಹುಲ್ ಭೋರೆ, ಸುಮೀತ್ ಶಿಂಧೆ, ಉತ್ತಮ್ ಗಾಯಕವಾಡ್ ಅವರನ್ನು ನೇಮಿಸಲಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೀಲಿಪಕುಮಾರ್ ವರ್ಮಾ ಅವರು, ಸಂಘಟನೆಯ ತತ್ವ ಸಿದ್ಧಾಂತಗಳ ಅನುಗುಣವಾಗಿ ಸಂಘಟನೆಯನ್ನು ಬಲಪಡಿಸಿ, ಜನಪರ, ದಲಿತಪರ, ರೈತಪರ, ಕಾರ್ಮಿಕಪರ, ಮಹಿಳಾ ಹಾಗೂ ವಿದ್ಯಾರ್ಥಿಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆಯನ್ನು ಸದೃಢಗೊಳಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News